ಮುಂಡಗೋಡ: ಬಟ್ಟೆ ಅಂಗಡಿ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೊದ ಯುವತಿಯೊಬ್ಬಳು ಮನೆಗೆ ಬಾರದೆ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಕಂಬಾರಗಟ್ಟಿಯ ಶಬನಂ ಮತ್ತಿಗಟ್ಟಿ ಕಾಣೆಯಾದ ಯುವತಿಯಾಗಿದ್ದಾಳೆ, ಇವಳು ಪಟ್ಟಣದ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದವಳು ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಸ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣಿಯಾಗಿದ್ದಾಳೆ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹುಡಕಾಡಿದರೂ ಇದುವರೆಗೂ ಪತ್ತೆಯಾಗದೇ ಇದ್ದಿದ್ದರಿಂದ ಕಾಣೆಯಾದವಳನ್ನು ಹುಡುಕಿಕೊಡುವಂತೆ ಕಾಣೆಯಾದ ಯುವತಿಯ ಚಿಕ್ಕಪ್ಪ ಕಲಂದರ ಮತ್ತಿಗಟ್ಟಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
: