• first
  second
  third
  previous arrow
  next arrow
 • ಶತಮಾನದ ಸನಿಹದಲ್ಲಿ ಟಿಎಸ್‍ಎಸ್; 2.20 ಕೋಟಿ ನಿವ್ವಳ ಲಾಭ, ಅ.21ಕ್ಕೆ ವಾರ್ಷಿಕ ಸಭೆ

  300x250 AD

  ಶಿರಸಿ: ರೈತ ಸದಸ್ಯರ ಸೇವೆಯಲ್ಲಿ 98ವರ್ಷವನ್ನು ಸಾರ್ಥಕವಾಗಿ ಪೂರೈಸಿ ಮುನ್ನಡೆಯುತ್ತಿರುವ ಶಿರಸಿಯ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯು 2020-21ನೇ ಸಾಲಿನಲ್ಲಿ ರೂ.2.20ಕೋಟಿ ನಿವ್ವಳ ಲಾಭ ಗಳಿಸಿದ್ದು ಶೇರುದಾರ ಸದಸ್ಯರಿಗೆ ಶೇ.20 ಲಾಭಾಂಶ ಘೋಷಿಸಿದೆ. ಸಂಘದ 2020-21ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯು ಅ.21 ರಂದು ಮಧ್ಯಾಹ್ನ 3 ಘಂಟೆಗೆ ಜರುಗಲಿದ್ದು, ಸಂಘದ ವಾರ್ಷಿಕ ಅಢಾವೆಯಲ್ಲಿ ಈ ವಿವರಗಳನ್ನು ನೀಡಲಾಗಿದೆ.


  ಸಂಘವು ವರದಿ ವರ್ಷದಲ್ಲಿಒಟ್ಟೂರೂ.1,233ಕೋಟಿ ವಹಿವಾಟು ನಡೆಸಿದೆ.ಸಂಘದದಲಾಲಿ ವಿಭಾಗದಲ್ಲಿ2.14 ಲಕ್ಷಕ್ವಿಂಟಲ್‍ವಿಕ್ರಿ ಮಾಡಿರೂ.699ಕೋಟಿ ವಹಿವಾಟು ನಡೆಸಲಾಗಿದೆ.ಸಂಘದ ಸಿಹಿ ಅಡಿಕೆ ಪುಡಿ ವಿಭಾಗದಲ್ಲಿ ರೂ.34ಕೋಟಿ ವಹಿವಾಟು ನಡೆಸಲಾಗಿದ್ದು,9,594ಕ್ವಿಂಟಲ್‍ಅಡಿಕೆ ವಿನಿಯೋಗಿಸಲಾಗಿದೆ.ಸಂಘದಅಡಿಕೆಖರೀದಿ ವಿಭಾಗದಲ್ಲಿ93,356ಕ್ವಿಂಟಲ್‍ಅಡಿಕೆ ಖರೀದಿಸಿ, ಸಂಸ್ಕರಿಸಿ ರೂ.268ಕೋಟಿ ವಹಿವಾಟು ನಡೆಸಿ ರೂ.5.89ಕೋಟಿ ಲಾಭ ಗಳಿಸಲಾಗಿದೆ.ಸಂಘದ ಸುಪರ್ ಮಾರ್ಕೆಟ್‍ನಕಿರಾಣಿಹಾಗೂ ಕೃಷಿ ವಿಭಾಗದಲ್ಲಿರೂ.209.13 ಕೋಟಿ ವಹಿವಾಟು ನಡೆಸಿ ರೂ.11.80ಕೋಟಿ ಲಾಭ ಗಳಿಸಲಾಗಿದೆ.


  ಸಂಘದಲ್ಲಿ ಸದಸ್ಯರ ಠೇವಣಿ ರೂ.250ಕೋಟಿಗೆ ಏರಿದ್ದು, ಸಂಘದ ಸ್ವಂತ ಠೇವಣಿ ವಿವಿಧ ಸಂಸ್ಥೆಗಳಲ್ಲಿ 52.01ಕೋಟಿ ಆಗಿರುತ್ತದೆ. ಸಂಘದ ವ್ಯಕ್ತಿ ಸದಸ್ಯರಿಗೆರೂ.255.88ಕೋಟಿ ಸಾಲ ನೀಡಿದ್ದು, ಪ್ರಾಥಮಿಕ ಸಹಕಾರಿ ಸಂಘಗಳಿಗೆ ರೂ.10.08ಕೋಟಿಸಾಲ ನೀಡಿದೆ. ಖರೀದಿದಾರರಿಗೂ ರೂ.130.65 ಕೋಟಿ ಉದ್ರಿ ನೀಡಿದ್ದುಇದರಿಂದ ಅಡಿಕೆ ಮಾರುಕಟ್ಟೆಒಂದು ಸ್ಥಿರ ದರದಲ್ಲಿ ನಿಲ್ಲುವಂತಾಗಿದೆ. ಸಿದ್ದಾಪುರ ಶಾಖೆಯಲ್ಲಿ44 ಸಾವಿರ ಕ್ವಿಂಟಲ್‍ ಅಡಿಕೆ ವಿಕ್ರಿ ಆಗಿದ್ದರೆ, ಯಲ್ಲಾಪುರದಲ್ಲಿಯೂ 41 ಸಾವಿರ ಕ್ವಿಂಟಲ್‍ ಅಡಿಕೆ ವಿಕ್ರಿ ವರದಿ ವರ್ಷದಲ್ಲಿ ಆಗಿರುತ್ತದೆ. ಮುಂಡಗೋಡ ಶಾಖೆ ಹಾಗೂ ಶಿರಸಿಯಲ್ಲಿ 1,363ಟನ್ ಜೋಳ ಖರೀದಿಸಲಾಗಿದೆ. ಸ್ವಂತ ಬಂಡವಾಳವು ರೂ.139 ಕೋಟಿಗೆ ಏರಿದೆ. ಗಳಿಸಿದ ಒಟ್ಟೂದಲಾಲಿ 7.32 ಕೋಟಿಗಳು. ಒಟ್ಟೂ ಲಾಭದ ಪೂರ್ವದಲ್ಲಿರೂ.17.79 ಕೋಟಿ ವಿವಿಧ ನಿಧಿಗೆ ತೆಗೆದಿರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿರೂ.7.03ಕೋಟಿ ಮೌಲ್ಯದ ಧಾರಾ ಹಿಂಡಿಯ60,995ಚೀಲಗಳನ್ನು ವಿಕ್ರಿ ಮಾಡಲಾಗಿದೆ. ಸಂಘದ ದೈನಂದಿನ ವಹಿವಾಟುಗಳಿಂದ ಸದಸ್ಯರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಸಂಘವು ಸರಕಾರಕ್ಕೂ ಸಹ ವಿವಿಧತೆರಿಗೆ/ಶುಲ್ಕದ ರೂಪದಲ್ಲಿ2020-21ನೇ ಸಾಲಿನಲ್ಲಿ ರೂ.46.61 ಕೋಟಿಗಳನ್ನು ಸಂದಾಯ ಮಾಡಿದೆ.

  ಹೊಸ ಯೋಜನೆಗಳು:ಸದಸ್ಯರ ಅಗತ್ಯಗಳನ್ನರಿತು ಅವರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಅನೇಕ ಸದಸ್ಯಪರ ಹಾಗೂ ವಿನೂತನ ಯೋಜನೆಗಳನ್ನು ಹಾಗೂ ಸೇವೆಗಳನ್ನು ಸಂಘವು ಪರಿಚಯಿಸುತ್ತಿದೆ. ಸಹಕಾರಿರಂಗದಲ್ಲಿ ಅನೇಕ “ಪ್ರಥಮ”ಗಳನ್ನು ನೀಡಿರುವ ಸಂಘವು ವಿಶಿಷ್ಟ ಹಾಗೂ ಅನುಕರಣೀಯ ಯೋಜನೆಗಳನ್ನು ನಿರಂತರವಾಗಿ ಸದಸ್ಯರಿಗೆ ನೀಡುತ್ತಿದೆ. ಅದರಂತೆ ಪ್ರಸಕ್ತ ವರ್ಷಕೂಡ ಈ ಕೆಳಗೆ ವಿವರಿಸಿದ ಯೋಜನೆಗಳನ್ನು ಸದಸ್ಯರ ಮುಂದಿಡುತ್ತಿದೆ.

  ಟಿ.ಎಸ್.ಎಸ್. ಋಣ ವಿಮೋಚನಾ ನಿಧಿ :
  ಈ ಯೋಜನೆಯಡಿ, ಸಾಲ ಹೊಂದಿರುವ ಮತ್ತು ಕಳೆದ ಮೂರು ವರ್ಷದಿಂದ ನಿರಂತರವಾಗಿ ಸಂಘದಲ್ಲೇ ಮಹಸೂಲು ವಿಕ್ರಯಿಸುತ್ತಿರುವಎಲ್ಲಾ ಸದಸ್ಯರೂ ನೋಂದಾವಣೆ ಮಾಡಿಕೊಳ್ಳಲು ಅರ್ಹರಿದ್ದು, ಸಾಲ ಮಂಜೂರಿ ಪಡೆದಿರಬೇಕಾಗಿರುತ್ತದೆ.ಋಣ ವಿಮೋಚನಾ ನಿಧಿಗೆ ಸಾಲಗಾರ ಸದಸ್ಯನಿಂದರೂ.4 ಲಕ್ಷ ವರೆಗಿನ ಸಾಲಕ್ಕೆ ಪ್ತತಿ ಲಕ್ಷರೂಪಾಯಿ ಸಾಲಕ್ಕೆ ಒಂದು ಸಾವಿರರೂಪಾಯಿಯಂತೆ ಹಾಗೂ ಅದರ ಮೇಲ್ಪಟ್ಟ ಸಾಲಕ್ಕೆ ಗರಿಷ್ಠ ರೂ.5 ಸಾವಿರವಂತಿಗೆಯನ್ನು ಸಾಲ ಮಂಂಜೂರಿ ವೇಳೆಯಲ್ಲಿ ಪಡೆದುಕೊಳ್ಳಲಾಗುತ್ತದೆ. ಅಂತಹ ಸಾಲಗಾರ ಸದಸ್ಯನು ಮರಣ ಹೊಂದಿದಲ್ಲಿ (ಆತ್ಮಹತ್ಯೆ ಹೊರತುಪಡಿಸಿ) ನಿಯಮಗಳಿಗನುಗುಣವಾಗಿ ಆ ಸದಸ್ಯರ ಖಾತೆಯಲ್ಲಿನ ಬಾಕಿಯನ್ನು ಸದಸ್ಯನ ಖಾತೆಯಲ್ಲಿನ ಠೇವಣಿ, ಶಿಲ್ಕು ಮಹಸೂಲು ಇದ್ದರೆಅದರ ಮೌಲ್ಯವನ್ನು ಕಳೆದು ಗರಿಷ್ಠ ರೂಪಾಯಿ ಐದು ಲಕ್ಷ ಮಿತಿಗೊಳಪಟ್ಟು ಋಣ ವಿಮೋಚನಾ ನಿಧಿಯಿಂದ ಭರಿಸಿಕೊಡಲಾಗುವುದು.

  ಟಿ.ಎಸ್.ಎಸ್. ಜೀವನ್ ಸಾಥಿ ವಧೂ-ವರರ ವೇದಿಕೆ ಹಾಗೂ ಪ್ರವಾಸೋದ್ಯಮ ಸೇವೆ ಸಂಘದ ವಧೂ ವರರ ವೇದಿಕೆ ಮೂಲಕ ವಧೂ ವರರ ನೋಂದಣಿ, ಮಾಹಿತಿ ವಿನಿಮಯ, ವಧೂ ವರರ ಸಂದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ ಹಾಗೂ ಪ್ರವಾಸೋದ್ಯಮ ಸೇವೆಯ ಮೂಲಕ ಸ್ಥಳೀಯ ಪ್ರವಾಸಿ ತಾಣಗಳ ಮಾಹಿತಿ, ಟೂರ್ ಪ್ಯಾಕೇಜ್‍ಗಳ ಮಾಹಿತಿಯನ್ನುಒದಗಿಸಲಾಗುತ್ತಿದೆ.

  300x250 AD

  ಟಿ.ಎಸ್.ಎಸ್. ಸದಸ್ಯರ ರಕ್ಷಾಕವಚ:
  ಸದಸ್ಯರ ವೈದ್ಯಕೀಯ ವೆಚ್ಚ ನಿರ್ವಹಣೆ ಸಲುವಾಗಿ ಸಂಘವು ಆರಂಭಿಸಿದ್ದ ಸದಸ್ಯರ ಕೃಷಿ ಕಾರ್ಮಿಕರಅವಘಡ ಪರಿಹಾರಯೋಜನೆ ಹಾಗೂ ಸದಸ್ಯರಆರೋಗ್ಯ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿ “ಟಿ.ಎಸ್.ಎಸ್. ಸದಸ್ಯರರಕ್ಷಾ ಕವಚ” ಎಂಬ ನೂತನ ಯೋಜನೆಯನ್ನು ಆರಂಭಿಸಿದೆ. ಇದುವರೆಗೆ ಐಚ್ಛಿಕವಾಗಿದ್ದ ಯೋಜನೆಯನ್ನು ಕಡ್ಡಾಯಗೊಳಿಸಿ, ಟಿ.ಎಸ್.ಎಸ್. ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಾತ್ರ ಸೀಮಿತವಾಗಿದ್ದ ಯೋಜನೆಯ ಸೌಲಭ್ಯವನ್ನು ಎಲ್ಲ ಆಸ್ಪತ್ರಗಳಿಗೂ ವಿಸ್ತರಿಸಿ, ಈ ಯೋಜನೆಯಲ್ಲಿ ಮಾರ್ಪಾಡು ಮಾಡಿ ಸದಸ್ಯರ ಮನೆಯ ಎಲ್ಲ ಸದಸ್ಯರಿಗೂ ಸಹ ವೈದ್ಯಕೀಯ ವೆಚ್ಚದ ಶೇ.100 ರಷ್ಟು ಪರಿಹಾರ ನೀಡುವಂತಾಗಿರುವುದಕ್ಕೆ ಸಮಾಧಾನವಿದೆ.

  ಇನ್‍ವೆಸ್ಟ್‍ಮೆಂಟ್ ವಿಭಾಗ:
  ಸಂಘವು ಸಮೃದ್ಧಿ ಚಿನ್ನದ ಉಳಿತಾಯ ಯೋಜನೆ, ಜೀವ ವಿಮೆ, ಮುಚ್ಯುವಲ್ ಫಂಡ್& ಶೇರ್‍ಮಾರುಕಟ್ಟೆಸಲಹೆ, ವಾಹನ ವಿಮೆ, ಡಿ-ಮ್ಯಾಟ್‍ ಅಕ್ವಾಂಟ್ ಮತ್ತಿತರ ಸೇವೆಗಳನ್ನು ಸೂಕ್ತವಾಗಿ ನಿರ್ವಹಿಸಲು ಇನ್‍ವೆಸ್ಟ್‍ಮೆಂಟ್ ವಿಭಾಗ ಪ್ರಾರಂಭಿಸಲಾಗಿದೆ. ಹಾಗೂ ಇದರ ಜೊತೆಯಲ್ಲಿ ಇಸಳೂರಿನ ಅರುಂಧತಿ ನಗರದಲ್ಲಿರುವ ನಿವೇಶನಗಳನ್ನು ಸಂಘದಿಂದ ಮಾರ್ಕೆಟಿಂಗ್‍ ಮಾಡಲಾಗುತ್ತಿದ್ದು, ಆಸಕ್ತ ಗ್ರಾಹಕರು ಖರೀದಿಸಬಹುದಾಗಿದೆ.

  ಫ್ರಾಂಚೈಸಿ/ಸಹೋದ್ಯಮ:
  ಸಂಘದ ಸುಪರ್ ಮಾರ್ಕೆಟ್‍ನಜನಪ್ರಿಯತೆ ಹೆಚ್ಚುತ್ತಿರುವುದರಿಂದ ಬೇರೆ ಬೇರೆ ಸ್ಥಳಗಳಲ್ಲಿ ಸಂಘದೊಂದಿಗೆ ಸಹೋದ್ಯಮಅಥವಾ ಫ್ರಾಂಚೈಸಿ ಘಟಕಆರಂಭಿಸಲಾಗಿದೆ. ಈಗಾಗಲೇ ಮುಧೋಳ, ಹುಲೇಕಲ್, ಸಾಲ್ಕಣಿ, ಹೆಗ್ಗೋಡು, ದಾಸನಕೊಪ್ಪದಲ್ಲಿ ಮಿನಿಸುಪರ್ ಮಾರ್ಕೆಟ್‍ ಆರಂಭವಾಗಿ ಉತ್ತಮವಾಗಿ ಕಾರ್ಯನಿರ್ವಹಹಿಸುತ್ತಿದೆ. ಮುಂದಿನ ದಿನಗಳಲ್ಲಿ ಸಿ.ಪಿ.ಬಝಾರ್, ಕೊರ್ಲಕಟ್ಟಾ, ಕೊರ್ಲಕೈಗಳಲ್ಲಿ ಪ್ರಾರಂಭವಾಗಲಿದೆ.

  ಕೃಷಿ ಉತ್ಪನ್ನಗಳ ಖರೀದಿ ಹಾಗೂ ಸಂಸ್ಕರಣೆ:
  ಕೃಷಿಕರ ಬೆಳೆಗಳಾದ ಅಡಿಕೆ(ಹಸಿ ಅಡಿಕೆ), ಶುಂಠಿ, ಅರಿಶಿಣ, ಬಾಳೆಕಾಯಿ, ಗೋಡಂಬಿ ಹಾಗೂ ತೆಂಗಿನಕಾಯಿಗಳ ಖರೀದಿಯನ್ನು ಪ್ರಾರಂಭಿಸಲಾಗಿದೆ,ಅಲ್ಲದೇಅಡಿಕೆಬೆಳೆಗಳನ್ನು ಸಂಸ್ಕರಿಸಿಕೊಡುವ ಸೌಲಭ್ಯವನ್ನೂ ಸಹ ರೈತ ಸದಸ್ಯರಿಗೆ ಕಲ್ಪಿಸಿಕೊಡಲಾಗಿದೆ.
  • ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಕೊಳೆ ರೋಗ ಪರಿಹಾರಕ್ಕೆ ಸಂಘದ ಸ್ವಂತ ಬ್ರಾಂಡ್‍ನಲ್ಲಿಟಿ.ಎಸ್.ಎಸ್. ಪೈಟರ್ ಹಾಗೂ ಟಿ.ಎಸ್.ಎಸ್. ಪವರ್ ವೆಟ್‍ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
  ವೈಯಕ್ತಿಕವಾದ ಲಾಭದಉದ್ದೇಶವಿಲ್ಲದೇ, ಸದಸ್ಯರ ಹಿತರಕ್ಷಣೆಯನ್ನೇ ಪ್ರಧಾನವಾಗಿರಿಸಿಕೊಂಡು ಸಂಘವು ಅಡಿಕೆ ಬೆಳೆಗಾರರ ಬೆಳೆಗೆ ಉತ್ತಮವಾದ ಸ್ಥಿರವಾದ ದರ ಹಾಗೂ ಬೇಡಿಕೆಕಲ್ಪಿಸುವ ಮೂಲಕ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದಂತೆಯೇ ಸಾಂಘಿಕ ಯತ್ನದಿಂದಾಗಿಅಡಿಕೆ ಬೆಳೆಗಾರರ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ಸಹ ಹಿಡಿತ ಸಾಧಿಸುತ್ತಿರುವುದು ಸಹಕಾರಿಕ್ಷೇತ್ರದಅಭೂತಪೂರ್ವ ಬೆಳವಣಿಗೆಯೆಂದರೆ ತಪ್ಪಾಗಲಿಕ್ಕಿಲ್ಲ.

  ಸಂಘದ ವಿಶಿಷ್ಟವಾದಸೇವೆಗಳು:
  • ಪಾನ್‍ಕಾರ್ಡ್ ವ್ಯವಸ್ಥೆ
  • ಪಹಣಿ ಪತ್ರಿಕೆ
  • ಇ-ಸ್ಟಾಂಪಿಂಗ್ ವ್ಯವಸ್ಥೆ
  • ವಿದ್ಯುತ್ ಬಿಲ್ ಪಾವತಿ
  • ಖರೀದಿದಾರರಿಗೆTin Fecilitation Center
  • ರೈತರಿಗೆ ಮಧ್ಯಾಹ್ನಊಟದ ವ್ಯವಸ್ಥೆ
  • ಊಟದ ನಂತರ ವಿಶ್ರಾಂತಿ ವ್ಯವಸ್ಥೆ
  • ಎಸ್.ಎಂ.ಎಸ್. ಮೂಲಕ ವ್ಯವಹಾರಗಳ ಮಾಹಿತಿ
  • ವ್ಯಾಪಾರಆದಾಗ ದರಗಳ ಮಾಹಿತಿಎಸ್.ಎಂ.ಎಸ್ ಮೂಲಕ
  • ಕಚ್ಚಾ ತೂಕ ಆದ ನಂತರ ಎಸ್.ಎಂ.ಎಸ್ ಮೂಲಕ ಮಾಹಿತಿ
  • ಸಂಘದಲ್ಲೇ RTGS/NEFT ಮೂಲಕ ಶುಲ್ಕ ರಹಿತ ಹಣದ ವರ್ಗಾವಣೆ ವ್ಯವಸ್ಥೆ.
  • ಸದಸ್ಯರೊಳಗಡೆ buy and sell
  • DTH ಮತ್ತು Mobile Recharge ವ್ಯವಸ್ಥೆ
  • ಬಸ್, ಟ್ರೇನ್ ಹಾಗೂ ಫ್ಲೈಟ್‍ಟಿಕೆಟ್ ಬುಕಿಂಗ್ ವ್ಯವಸ್ಥೆ.
  • ಕಾಮನ್ ಸರ್ವಿಸ್ ಸೆಂಟರ್ ಪ್ರಾರಂಭ

  Share This
  300x250 AD
  300x250 AD
  300x250 AD
  Back to top