• first
    second
    third
    previous arrow
    next arrow
  • ಜಿಲ್ಲೆಯೆಲ್ಲೆಡೆ ಸಂಭ್ರಮದ ಭೂಮಿ ಹುಣ್ಣಿಮೆ

    300x250 AD

    ಶಿರಸಿ: ಭೂಮಿ ಹುಣ್ಣಿಮೆ ಪ್ರಯುಕ್ತ ಬುಧವಾರ ರೈತರು ತಮ್ಮ ಹೊಲಗಳಲ್ಲಿ ಭೂಮಿ ತಾಯಿಯನ್ನು ಪೂಜಿಸಿ ನಮಿಸಿದರು. ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಭೂಮಿ ಪೂಜೆಯೂ ಒಂದು. ವಿಶೇಷವಾಗಿ ರೈತರು ಇಂದು ತಮ್ಮ ಪೈರುಗಳಿಗೆ ಪೂಜೆ ಸಲ್ಲಿಸಿ ಭೂ ತಾಯಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

    ಭೂಮಿ ಪೂಜೆಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ನಡೆಸಲಾಗುತ್ತದೆ. ಅದೇರೀತಿ ಶಿರಸಿ ತಾಲೂಕಿನ ಹಲವೆಡೆ ಅಡಿಕೆ ತೋಟ, ಭತ್ತದ ಗದ್ದೆಗಳಲ್ಲಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ವರ್ಷಪೂರ್ತಿ ದುಡಿದು ಬೇಸಾಯ ಮಾಡುವ ಭೂಮಿಗೆ ರೈತರು ಪೂಜೆ ಸಲ್ಲಿಸಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿ ಭೂತಾಯಿ ಗೆ ಬಾಗಿನ ಸಮರ್ಪಿಸಿದರು.

    300x250 AD

    ಬೆಳೆ ಹಾಗೂ ಭೂಮಿಯ ಮೇಲೆ ಯಾವುದೇ ದುಷ್ಟ ಶಕ್ತಿಗಳ ನೆರಳು ಬೀಳಬಾರದು. ರೋಗ ಬಾದೆ ಸೇರಿದಂತೆ ಯಾವುದೇ ತೊಂದರೆಗಳು ಆಗದೆ ಉತ್ತಮ ಫಸಲು ಕೊಡು ಎಂದು ಭೂಮಿ ತಾಯಿಯಲ್ಲಿ ಪ್ರಾರ್ಥಿಸಿದರು.

    Share This
    300x250 AD
    300x250 AD
    300x250 AD
    Back to top