• first
  second
  third
  previous arrow
  next arrow
 • ಅಥ್ಲೇಟಿಕ್ಸ್’ನಲ್ಲಿ ನಯನಾ ಸಾಧನೆ

  300x250 AD


  ಮುಂಡಗೋಡ: ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ 400ಮೀ. ಅಥ್ಲೆಟಿಕ್ಸ್ ನಲ್ಲಿ ತೃತಿಯ ಸ್ಥಾನ ಪಡೆದ, ತಾಲೂಕಿನ ಚಳಗೇರಿಯ ನಯನಾ ಕೊಕರೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

  ಚಳಗೇರಿಯ ನಯನಾ ಕೊಕರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದು, ಆಕೆಯ ಸಾಧನೆ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ. ಕಾಲೇಜು ವಿದ್ಯಾರ್ಥಿನಿಯ ಸಾಧನೆಯ ಬಗ್ಗೆ ಉಪನ್ಯಾಸಕರು, ಸಹಪಾಠಿ ವಿದ್ಯಾರ್ಥಿಗಳು ಕೊಂಡಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ರಾಮಣ್ಣ ಪಾಲೇಕರ್ ಅವರು ವಿದ್ಯಾರ್ಥಿನಿಗೆ 1001 ರೂಪಾಯಿಗಳನ್ನು ನೀಡಿ, ಅವಳ ಮುಂದಿನ ಕ್ರೀಡಾಜೀವನ ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

  300x250 AD


  ಈ ಸಂದರ್ಭದಲ್ಲಿ ಪ್ರಾಚಾರ್ಯ ಗುಡ್ಡಪ್ಪ ಕಡೆಮನಿ, ಉಪನ್ಯಾಸಕಿ ಸುಮನ್ ಭಂಡಾರಿ, ಇತರ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top