
ಶಿರಸಿ: ನಟ ಅಮೀರ್ ಖಾನ್ ನಟಿಸಿರುವ ಸಿಯೆಟ್ ಬೈಕ್ ಟೈರಿನ ಜಾಹಿರಾತೊಂದರಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಲಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಕಿಡಿಕಾರಿದ್ದಾರೆ.
ಈ ಕುರಿತು ಸಿಯೆಟ್ ಬೈಕ್ ಟೈರಿನ ಮುಖ್ಯಸ್ಥರಿಗೆ ಪತ್ರ ಬರೆದಿರುವ ಸಂಸದ ಹೆಗಡೆ, ಪಟಾಕಿಗಳನ್ನು ರಸ್ತೆ ಮೇಲೆ ಹೊಡೆಯುವುದರಿಂದ ಸಮಸ್ಯೆ ಆಗುತ್ತದೆ ಎಂದಾದರೆ, ರಸ್ತೆ ಮೇಲೆ ನಮಾಝ್ ಮಾಡುವುದರಿಂದಲೂ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಪ್ರತಿನಿತ್ಯ ಆಝಾನ್ ಕೂಗುವುದರಿಂದ ಶಬ್ಧ ಮಾಲಿನ್ಯವಾಗುತ್ತದೆ. ಆ ಕುರಿತಾಗಿಯೂ ತಾವು ತಮ್ಮ ಜಾಹಿರಾತಿನಲ್ಲಿ ತೋರಿಸಿ ಎಂದು ಸಂಸದ ಹೆಗಡೆ ಆಗ್ರಹ ಮಾಡಿದ್ದಾರೆ. ಜೊತೆಗೆ ಈ ಕೂಡಲೇ ಜಾಹಿರಾತನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಆ ಪತ್ರದ ಸಾರಾಂಶ ಇಲ್ಲಿದೆ.
“ಹಿಂದುಗಳ ಆಚರಣೆಗಳನ್ನು ಹೀಯಾಳಿಸುವುದೊಂದೆ ಇವರ ಕೆಲಸವೇ ?
ಪರಿಸರವಾದಿ, ಪ್ರಾಣಿಪ್ರೇಮಿ ಆಮೀರ್ ಖಾನ್ ಅಭಿನಯಿಸಿರುವ ಜಾಹೀರಾತು ಒಂದರಲ್ಲಿ ದೀಪಾವಳಿ ಹಬ್ಬದಲ್ಲಿ ಹಿಂದುಗಳಿಗೆ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾನೆ….. ಅವರು ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಮೆಚ್ಚುಗೆ!!!!!
ಅದರಂತೆ ಅನ್ಯಧರ್ಮಗಳಲ್ಲಿ (ತಾನು ಪ್ರತಿಪಾದಿಸುವ ಧರ್ಮವನ್ನು ಹಿಡಿದು) ನಡೆಯುವ ಎಷ್ಟೋ ಆಚರಣೆಗಳ ಬಗ್ಗೆ ಏಕೆ ಮೌನ..
ಪ್ರತಿದಿನ ಬೆಳಗ್ಗೆ ಚೀರುವ ಧ್ವನಿವರ್ಧಕಗಳು, ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳು ಅಮೀರ್ ಖಾನ್ ಗಮನ ಹರಿಸಿದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ.
ಅಂದಹಾಗೆ ಈ ರೀತಿಯ ಜಾಹೀರಾತುಗಳು ಹಿಂದುಗಳ ಭಾವನೆಗಳನ್ನು ತುಳಿಯಲು ಮಾಡಿದ ಕ್ಷುಲಕ ಕುತಂತ್ರವಲ್ಲದೆ ಮತ್ತೇನೂ ಆಗಿರುವುದಿಲ್ಲ.. ಅಂತೆಯೇ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ಅಭಿನೇತರriಗೇನು ಕಮ್ಮಿಯಿಲ್ಲ…..
ಈ ಜಾಹಿರಾತನ್ನು ಶ್ರೀ ಅನಂತ ವರಧಾನ್ ಗೋಯೆಂಕ ಮಾಲೀಕತ್ವದ CEAT ಸಂಸ್ಥೆಯು ಪ್ರಸ್ತುತ ಪಡೆಸಿದ್ದು, ಈ ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು ಹಾಗೂ ಹಿಂದೂಗಳೇ ಆಗಿರುವ ಅವರು ಹಿಂದುಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿ ಆಗ್ರಹ ಎಂದು ಅವರು ಪತ್ರ ಬರೆದಿದ್ದಾರೆ.