ಮುಂಡಗೋಡ: ಸಾರಾಯಿ ಕುಡಿಯದಂತೆ ಬುದ್ದಿಮಾತು ಹೇಳಿದ್ದಕ್ಕೆ ಮನಸ್ಸಿಗೆ ಬೇಸರ ಮಾಡಿಕೊಂಡ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮರಗಡಿ ಗ್ರಾಮದ ಗೌಳಿದಡ್ಡಿಯ ಅರಣ್ಯ ಪ್ರದೇಶದಲ್ಲಿ ಜರುಗಿದೆ.
ನಿನ್ನು ಪೊಂಡೆ(೪೦) ಎಂಬವನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತನು ಸಾರಾಯಿ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳೊಂದಿಗೆ ಪ್ರತಿ ದಿನ ಜಗಳ ಮಾಡುತ್ತಿದ್ದನು ಮನೆಯಲ್ಲಿ ಸಾರಾಯಿ ಕುಡಿಯದಂತೆ ಬುದ್ದಿ ಮಾತು ಹೇಳುತ್ತಿರುವುದನ್ನೆ ಮನಸ್ಸಿಗೆ ಬೇಸರ ಮಾಡಿಕೊಂಡು ಮಂಗಳವಾರ ಬೆಳಗ್ಗೆ ಮನೆಯ ಎದುರು ಇರುವ ಕಾಡಿನಲ್ಲಿ ನೈಲಾನ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಹೆಂಡತಿ ಬೊಮ್ಮುಬಾಯಿ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.