• first
    second
    third
    previous arrow
    next arrow
  • ನಿಂತಿದ್ದ ಬೈಕಿಗೆ ಸಾರಿಗೆ ಬಸ್ ಡಿಕ್ಕಿ; ಸವಾರ ಸಾವು

    300x250 AD

    ಶಿರಸಿ: ತಾಲೂಕಿನ ಶಿರಸಿ ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಗೊಟಗೋಡಿ ಕ್ರಾಸ್ ಸಮೀಪದಲ್ಲಿ ನಿಂತ ಬೈಕಿಗೆ ಸಾರಿಗೆ ಬಸ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಸವಾರ ಮೃತಪಟ್ಟಿದ್ದಾನೆ.


    ಅಬ್ದುಲ್ಗನಿಸಾಬ ಅಲೀಸಾಬ ಶಿರಗೋಡ (69) ಮೃತ ವ್ಯಕ್ತಿಯಾಗಿದ್ದು, ಈತ ಈತ ಹರಗನಹಳ್ಳಿಯಿಂದ ಭದ್ರಾಪುರ ಗ್ರಾಮದಲ್ಲಿರುವತನ್ನ ಮಗಳ ಮನೆಗೆ ಬಂದಿದ್ದ. ಈ ವೇಳೆ ಕ್ರಾಸ್ ಸನಿಹದಲ್ಲಿ ರಸ್ತೆಯಂಚಿಗೆ ಬೈಕ್ ನಿಲ್ಲಿಸಿದ್ದ ವೇಳೆ ಎದುರಿಗೆ ಹುಬ್ಬಳ್ಳಿಯಿಂದ ಶಿರಸಿ ಕಡೆ ವೇಗವಾಗಿ ಹೋಗುತ್ತಿದ್ದ ಬಸ್ ಚಾಲಕನಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಅಬ್ದುಲ್‍ಗನಿ ತೀವ್ರವಾಗಿ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top