• first
  second
  third
  previous arrow
  next arrow
 • ಭಟ್ಕಳ ಪುರಸಭೆ ಅಂಗಡಿ ಹರಾಜು ಪ್ರಕ್ರಿಯೆ; 9 ಅಂಗಡಿಗಳ ಶಾಂತಿಯುತ ಹರಾಜು

  300x250 AD

  ಭಟ್ಕಳ: ಇಲ್ಲಿನ ಪುರಸಭೆಯ ಮೊದಲ ಹಂತದ 27 ಅಂಗಡಿಗಳ ಪೈಕಿ 9 ಅಂಗಡಿಗಳ ಹರಾಜು, 3 ಅಂಗಡಿಗಳ ಮರು ಹರಾಜು ಪ್ರಕ್ರಿಯೆ ನಡೆದಿದ್ದು, ಬಿಗಿ ಪೋಲಿಸ್ ಬಂದೋಬಸ್ತನಲ್ಲಿ ಸೋಮವಾರ ಸಹಾಯಕ ಆಯುಕ್ತ ಮಮತಾ ದೇವಿ ಜಿ ಎಸ್ ಅವರ ನೇತ್ರತ್ವದಲ್ಲಿ ಪುರಸಭೆ ಸಭಾಗೃಹದಲ್ಲಿ ಶಾಂತಿಯುತವಾಗಿ ನಡೆಯಿತು.

  ಪುರಸಭೆ ಖಾಲಿ ಇರುವ 27 ಹಳೆ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ 67 ಅರ್ಜಿಗಳು ಬಂದಿದ್ದವು ಈ ಪೈಕಿ ಕೆಲವು ಅಂಗಡಿಗಳು ಯಾರೂ ಅರ್ಜಿ ಸಲ್ಲಿಸಿಲ್ಲವಾಗಿದೆ ಎಂದು ತಿಳಿದು ಬಂದಿದೆ. ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಸಹಾಯಕ ಆಯುಕ್ತ ಮಮತಾದೇವಿ ಜಿ.ಎಸ್ ಅವರ ನೇತ್ರತ್ವದಲ್ಲಿ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

  ಆರಂಭದಲ್ಲಿ ಪುರಸಭೆ ಸಮುದಾಯ ಸಂಘಟನಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಅವರು 12 ವರ್ಷದ ಅವಧಿಗೆ ಮಾಸಿಕ ಲೈಸೆನ್ಸ್ ನಾಳೆಯಿಂದ ಅಂಗಡಿ ಮಳಿಗೆಯನ್ನು ತಾಬೆಗೆ ಪಡೆದುಕೊಳ್ಳುವ ಬಗ್ಗೆ 22 ಅಂಶಗಳುಳ್ಳ ಷರತ್ತುಗಳನ್ನು ಅರ್ಜಿ ಸಲ್ಲಿಸಿದ ಹರಾಜುದಾರರ ಎದುರು ಸವಿವರವಾಗಿ ಓದಿದರು.

  ನಂತರ ಹರಾಜು ಪುಕ್ರಿಯೆಯಲ್ಲಿ ಪಾಲ್ಗೊಂಡ ಪುರಸಭೆ ಮಾಜಿ ಸದಸ್ಯ ವೆಂಕಟೇಶ ನಾಯ್ಕ ಮಾತನಾಡಿ ಸದ್ಯ ಹರಾಜು ಪ್ರಕ್ರಿಯೆ ನಡೆಯುತ್ತಿರುವ ಅಂಗಡಿ ಮಳಿಗೆಗಳಿರುವುದು ಹಳೆ ಪುರಸಭೆ ಕಟ್ಟಡದಲ್ಲಿದ್ದು, ಆದರೆ ಆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಹರಾಜಿನಲ್ಲಿ ಅಂಗಡಿಕಾರರು ಅಂಗಡಿ ನಡೆದು ಸಾವಿರಾರು ಗಟ್ಟಲೇ ಹಣ ಬಾಡಿಗೆ ನೀಡಿ ಕಟ್ಟಡ ಏನಾದರು ಬಿದ್ದರೆ ಅದಕ್ಕೆ ಪೂರಕ ವ್ಯವಸ್ಥೆ ಇದೆಯಾ ಅಂಗಡಿಕಾರ ತನ್ನ ಸಂಸಾರ ಸಾಗಿಸಲು ಅಂಗಡಿ ನಡೆದು ಅಂಗಡಿಯಲ್ಲಿ ಇರುವ ವೇಳೆ ಅನಾಹುತ ಆದರೆ ಏನು ಗತಿ ಯಾರು ಹೊಣೆಯಾಗಲಿದ್ದಾರೆ ಅದಕ್ಕೆ, ಪುರಸಭೆಯಿಂದ ಅಂಗಡಿಕಾರನಿಗೆ ಯಾವುದಾದರು ಪರಿಹಾರ ನೀಡಲಿದ್ದಾರೆಯೇ ಎಂದು ಪ್ರಶ್ನಿಸಿದರು.
  ಇದಕ್ಕೆ ಸಭೆಯ ಅಧ್ಯಕ್ಷತೆ ವಹಿಸಿದ ಪುರಸಭೆ ಅಧ್ಯಕ್ಷ ಪರ್ವೇಕ್ ಕಾಶಿಂಜೀ ’ಅಂಗಡಿ ಹರಾಜಿನಲ್ಲಿ ಪಡೆದ ಅಂಗಡಿಕಾರರಿಗೆ ಸಾಮಾನ್ಯ ಷರತ್ತುಗಳನ್ನು ಓದಿ ತಿಳಿಸಲಾಗಿದೆ. ಈಗ ಕಟ್ಟಡ ಶಿಥಿಲಾವಸ್ತೆಗೆ ಬಂದಿರುವ ಬಗ್ಗೆ, ಹರಾಜಿನಲ್ಲಿ ಮಾತನಾಡುವುದು ಸರಿಯಲ್ಲ ಒಂದು ವೇಳೆ ಕಟ್ಟಡ ಶಿಥಿಲಾವಸ್ತೆಯಲ್ಲಿದ್ದಲ್ಲಿ ಈ ಬಗ್ಗೆ ಗಮನ ಹರಿಸಿ ಒಂದು ನೋಟಿಸ್ ನೀಡಿ ಅವರನ್ನು ಖುಲ್ಲಾ ಪಡಿಸಿ ತದನಂತರ ಪರ್ಯಾಯ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ಸದ್ಯಕ್ಕೆ ಯಾವುದೇ ನಿಖರ ಭರವಸೆ ನೀಡಲು ಸಾಧ್ಯವಿಲ್ಲ ಪ್ರತ್ಯುತ್ತರಿಸಿದರು.

  ತದನಂತರ ಪುರಸಭೆ ಸಮುದಾಯ ಸಂಘಟನಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಹಾಗೂ ಪುರಸಭೆ ತೆರಿಗೆ ವಸೂಲಿ ಸಹಾಯಕ ಲೂಯಿಸ್ ಡಿಸೋಜಾ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು.ಪುರಸಭೆಯ 27 ಅಂಗಡಿಗಳ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಿದ 67 ಮಂದಿ ಬಿಡ್ ದಾದರು ಅಂಗಡಿ ಹರಾಜಿನಲ್ಲಿ ಪಾಲ್ಗೊಂಡರು. ಒಟ್ಟು 9 ಅಂಗಡಿಯನ್ನು ಬಿಡ್ ದಾರರು ಹರಾಜು ಮೂಲಕ ಸರಕಾರದ ನಿಗದಿತ ಬೆಲೆಗಿಂತ 4-5 ಪಟ್ಟು ಹೆಚ್ಚು, ಬೆಲೆಗೆ ಹರಾಜು ಕೂಗಿ ಸ್ಪರ್ಧೆಗಿಳಿದ ಅವರು ತನಗೆ ಅನುಕೂಲವಾದ ಬಾಡಿಗೆ ಮೊತ್ತಕ್ಕೆ ಅಂಗಡಿಗಳನ್ನು ಹರಾಜು ಕೂಗಿ ನಡೆದುಕೊಂಡರು.

  300x250 AD

  ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಕಾಯ್ದಿರಿಸಿದ ಅಂಗಡಿ ಹರಾಜು ಹಾಕುವ ವೇಳೆ ಹರಾಜಿನಲ್ಲಿ ಭಾಗವಹಿಸಿದ ದಲಿತ ಯುವ ಮುಖಂಡ ದಿನೇಶ್ ಪಾವಸ್ಕರ ಮಾತನಾಡಿ ಪುರಸಭೆ ಅಧಿಕಾರಿಗಳು ನೈಜ ದಲಿತರು ಯಾರು ಎಂದು ನೀವು ಸರಿಯಾಗಿ ದಾಖಲಾತಿ ಪರಿಶೀಲನೆ ಮಾಡದೇ ಹರಾಜು ಪ್ರಕ್ರಿಯೆ ನಡೆಸಿದ್ದು ಸರಿ ಅಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

  ಪುರಸಭಾ ಅಧಿಕಾರಿಗಳು ನೀವು ಕಾನೂನಿನ ವಿರುದ್ಧವಾಗಿ ಈ ಹರಾಜು ಪ್ರಕ್ರಿಯೆ ನಡೆಸುತ್ತಿದ್ದೀರಿ. ಇದರಿಂದ ನೈಜ ದಲಿತರಿಗೆ ಅನ್ಯಾಯ ಆಗುತ್ತಿದೆ ಎಂದು ಹರಾಜು ಪ್ರಕ್ರಿಯೆಯ ವೇಳೆ ಗಟ್ಟಿ ಧ್ವನಿಯಲ್ಲಿ ನೇರ ಆರೋಪ ಮಾಡಿದರು. ಪುರಸಭೆ ಅಧಿಕಾರಿಗಳು ಮೊದಲು ನೈಜ ದಲಿತರು ಯಾರು ಎಂದು ಅವರ ಜಾತಿ ಪಮಾಣ ಪತ್ರ ಸರಿಯಾಗಿ ಇದೆಯೋ, ಇಲ್ಲ ಎಂದು ಪರಿಶೀಲಿಸಿ ಈ ಹರಾಜು ಪ್ರಕ್ರಿಯೆ ನಡೆಸಬೇಕಿತ್ತು ಎಂದ ಆಗ್ರಹಿಸಿದರು.

  ಈ ಸಂದರ್ಭದಲ್ಲಿ ತಹಸೀಲ್ದಾರ ರವಿಚಂದ್ರ ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಎಸ್.ಎಸ್, ಪುರಸಭಾ ಸ್ಮಾಯಿ ಸಮಿತಿ ಅಧ್ಯಕ್ಷ ನಯಾಜ್ ಮುಲ್ಲಾ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

  ಈ ಹರಾಜು ಪ್ರಕ್ರಿಯೆಗೆ ಸಿ.ಪಿ.ಐ.ದಿವಾಕರ ನೇತೃತ್ವದಲ್ಲಿ ನಗರ ಠಾಣೆ ಪಿ.ಎಸ್.ಐ ಸುಮಾ ಆಚಾರ್ಯ ಹೆಚ್ ಕುಡಗುಂಟೆ, ಗ್ರಾಮೀಣ ಠಾಣೆ ಪಿಎಸ್ ಐ ಭರತ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ ಏರ್ಪಡಿಸಿದ್ದರು.

  Share This
  300x250 AD
  300x250 AD
  300x250 AD
  Back to top