ಭಟ್ಕಳ: ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಸಾವನ್ನಪ್ಪಿದ ಘಟನೆ ಮಾರುಕೇರಿಯ ಹೂತ್ಕಲದಲ್ಲಿ ನಡೆದಿದೆ.
ನಾಗೇಶ ಮಂಜಯ್ಯ ಭಟ್(48) ಮೃತ ವ್ಯಕ್ತಿಆಗಿದ್ದಾನೆ. ಈತ ಮನೆಯ ಮುಂದಿನ ತೋಟದಲ್ಲಿ ಕೃಷಿ ಚಟುವಟಿಯಲ್ಲಿ ತೊಡಗಿದ್ದಾಗ ಕೊಕ್ಕೆಯನ್ನು ಕೈಯಲ್ಲಿ ಹಿಡಿದು ಹೀರೆಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೈಯಲ್ಲಿದ್ದ ಕೊಕ್ಕೆ ವಿದ್ಯುತ್ ತಂತಿಗೆ ತಗುಲಿ ಕೊಕ್ಕೆಯ ಮುಖಾಂತರ ವ್ಯಕ್ತಿಗೆ ವಿದ್ಯುತ್ ತಗುಲಿದ ಪರಿಣಾವಾಗಿ ಈ ಅವಘಡ ಸಂಭವಿಸಿದೆ. ವಿದ್ಯುತ್ ತಗುಲುತ್ತಿದ್ದಂತೆ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ನಂತರ ಮೃತ ವ್ಯಕ್ತಿಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.