ಯಲ್ಲಾಪುರ: ಸದಸ್ಯರ ಹಿತ ಕಾಯಲು ಸಂಘ ಬದ್ಧವಾಗಿದ್ದು, ಸದಸ್ಯರ ಅನುಕೂಲಕ್ಕಾಗಿ ಸೂಪರ್ ಮಾರ್ಕೆಟ್ ಮೂಲಕ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಟಿ.ಎಸ್.ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಹೇಳಿದರು.
ಅವರು ಪಟ್ಟಣದ ಟಿ.ಎಸ್.ಎಸ್ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಹಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಹಲವು ವರ್ಷಗಳಿಂದ ಸಂಘದಲ್ಲಿ ವ್ಯವಹಾರ ನಡೆಸುತ್ತಿರುವ 15 ಸದಸ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ನಿರ್ದೇಶಕರಾದ ಸಿ.ಎನ್.ಹೆಗಡೆ ಹೂಡ್ಲಮನೆ, ಶಶಾಂಕ ಹೆಗಡೆ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ನರಸಿಂಹ ಭಟ್ಟ ಗುಂಡ್ಕಲ್, ಸದಸ್ಯ ಕೆ.ಜಿ.ಬೋಡೆ, ಶಾಖಾ ವ್ಯವಸ್ಥಾಪಕ ವಸಂತ ಗೌಡ ಇತರರಿದ್ದರು. ಪ್ರಜ್ಞಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಗಣೇಶ ಹೆಗಡೆ ನಿರ್ವಹಿಸಿದರು