ಯಲ್ಲಾಪುರ: ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ತಾಲೂಕಾ ಆಡಳಿತ, ತಾ.ಪಂ, ಪ.ಪಂ.ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನೆಡೆಯಿತು.
ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ರಾಮಾಯಣದಂತಹ ಮಹಾಕಾವ್ಯವನ್ನು ಬರೆದ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಸರ್ವಕಾಲಿಕ ಮೌಲ್ಯವಾಗಿದ್ದು, ಅದನ್ನು ಅಳವಡಿಸಿ ಕೊಳ್ಳುವ ಪ್ರಯತ್ನ ನಮ್ಮದಾಗಲೆಂದರು.
ಪ.ಪಂ ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ಸಮುದಾಯದ ಭೀಮಶಿ ವಾಲ್ಮೀಕಿ, ಆರ್.ಎಚ್.ಶಿವಳ್ಳಿ, ಪ್ರಮುಖರಾದ ಜಗನ್ನಾಥ ರೇವಣಕರ್, ಮಾರುತಿ ಬೋವಿವಡ್ಡರ್, ಗೋಪಾಲ ಸಿದ್ದಿ, ತಹಶೀಲ್ದಾರ ಗ್ರೇಡ್ 2 ಸಿ.ಜಿ.ನಾಯ್ಕ, ಬಿಇಒ ಎನ್.ಆರ್.ಹೆಗಡೆ, ಡಾ.ನರೇಂದ್ರ ಪವಾರ, ಇಒ ಜಗದೀಶ ಕಮ್ಮಾರ, ಸಮಾಜ ಕಲ್ಯಾಣ ಇಲಾಖೆಯ ನಾಗೇಶ ಮಲಮೇತ್ರಿ ಮುಂತಾದವರು ಇದ್ದರು.