ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಲ್ಮಿಕಿ ಜಯಂತಿಗೆ ಶಾಸಕಿ ರೂಪಾಲಿ ನಾಯ್ಕ ಅವರು ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಿದ್ದಿ ಸಮುದಾಯದವರ ಡಮ್ಮಾಮಿ ಜಾನಪದ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.
ಇದಾದ ಬಳಿ ಜಯಂತಿಯ ಅಂಗವಾಗಿ ಕಾರವಾರ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ. ಪಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಓ ಪ್ರಿಯಾಂಗಾ ಎಂ. ಎ. ಸಿ. ವಿದ್ಯಾಶ್ರೀ ಚಂದರಗಿ ಸೇರಿದಂತೆ ವಿವಿಧ ದಲಿತ ಸಮುದಾಯದ ಮುಖಂಡರು ಇದ್ದರು