ಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಸ್ಥಾನದಲ್ಲಿ ಸುಷಿರ ಸಂಗೀತ ಪರಿವಾರದಿಂದ ಸಂಗೀತ ಕಾರ್ಯಕ್ರಮದಲ್ಲಿ ಪಂ. ಪ್ರಕಾಶ್ ಹೆಗಡೆ, ಕಲ್ಲಾರೆಮನೆ ಕೊಳಲು ವಾದನ ಮತ್ತು ಭರತ ಹೆಗಡೆ, ಹೆಬ್ಬಲಸು ಇವರ ಹಾರ್ಮೋನಿಯಂ ವಾದನದ ಜುಗಲ್ಬಂದಿ ನಡೆಯಿತು.
ಮೊದಲಿಗೆ ತೀನ್ ತಾಲದಲ್ಲಿ ರಾಗ ಪೂರಿಯಾ ಕಲ್ಯಾಣ ಪ್ರಸ್ತುತಪಡಿಸಿದ ಕಲಾವಿದರು, ಶ್ರೀರಾಮ ಚಂದಿರನೆ ಹಾಗೂ ಜೈಜಗದೀಶಹರೆ ಭಜನ್ ನುಡಿಸುವುದರೊಂದಿಗೆ ನಾದಮಾಧುರ್ಯ ಸೃಷ್ಟಿಸಿದರು. ಪಂ. ಉದಯರಾಜ್ ಕರ್ಪೂರ್, ಬೆಂಗಳೂರು, ಮಂಜುನಾಥ ಹೆಗಡೆ, ಮೋಟಿನಸರ, ಕುಮಾರ್ ಪ್ರದ್ಯುಮ್ನ ಕರ್ಪೂರ್ ಇವರ ತಬಲಾ ಸಾಥ್ ಮುದ ನೀಡಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕ ಸುಷಿರ ಸಂಗೀತ ಪರಿವಾರದ ಮುಖ್ಯಸ್ಥ ನಾರಾಯಣ ಹೆಗಡೆ, ಕಲ್ಲಾರೆಮನೆ ಇವರನ್ನು ಶ್ರೀ ಭುವನೇಶ್ವರಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು. ಮಂಜುನಾಥ ಹೆಗಡೆ, ಮರಲಿಗೆ ವಂದಿಸಿದರು.