• first
  second
  third
  previous arrow
  next arrow
 • ಜೋಯಿಡಾದಲ್ಲಿ ಅ. 22 ಅರಣ್ಯವಾಸಿಗಳ ಸಮಸ್ಯೆ ಚರ್ಚೆ

  300x250 AD


  ಜೋಯಿಡಾ: ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಸ್ಫಂದಿಸುವಂತೆ ಅಗ್ರಹಿಸಿ ಅಕ್ಟೋಬರ್, 22 ಶುಕ್ರವಾರ ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ, ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಲು ಹೋರಾಟಗಾರರ ವೇದಿಕೆಯು ನಿರ್ಧರಿಸಿರುವದು ಅರಣ್ಯವಾಸಿಗಳ ವಿರುದ್ಧ ಅರಣ್ಯ ಅಧಿಕಾರಿಗಳಿಂದಾಗುವ ದೌರ್ಜನ್ಯ ನಿಯಂತ್ರಣಗುಳ್ಳುವುದೇ ಎಂಬ ಚರ್ಚೆ ಅರಣ್ಯವಾಸಿಗಳಲ್ಲಿ ಕೇಳಿಬರುತ್ತಿದೆ.

  ಅಂದು ಮುಂಜಾನೆ 11:30 ಕ್ಕೆ ಸಂತ್ರಸ್ಥ ಅರಣ್ಯವಾಸಿಗಳ ಉಪಸ್ಥಿತಿಯಲ್ಲಿ ಜರಗುವ ಸಭೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಉಪಸ್ಥಿತರಿರುವುದು ಹಾಗೂ ತಾಲೂಕಾದ್ಯಂತ ಅರಣ್ಯ ಅಧಿಕಾರಿಗಳು ಸದ್ರಿ ಸಭೆಯಲ್ಲಿ ಭಾಗವಹಿಸುವಂತೆ ಹೋರಾಟಗಾರರ ವೇದಿಕೆ ಸೂಚಿಸಿರುವುದು ಸಭೆಯ ಮಹತ್ವವನ್ನು ಪಡೆದುಕೊಂಡಿದೆ.
  ನಿರಂತರ ಅರಣ್ಯವಾಸಿಗಳ ಮೇಲೆ ಜರಗುತ್ತಿರುವ ಕಿರುಕುಳ, ದೌರ್ಜನ್ಯ, ಸಾಗುವಳಿ ಭೂಮಿಯಲ್ಲಿ ಅಗಳ ಹೊಡೆಯುವಿಕೆ, ವಿನಾಕಾರಣ ತೊಂದರೆ ಕೊಡುವುದು ಒಂದೆಡೆಯಾದರೇ, ಇನ್ನೋಂದೆಡೆ ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಅರ್ಜಿ ಮಂಜೂರಿ ಪ್ರಕ್ರೀಯೆಯಲ್ಲಿ ಇದ್ದಾಗಲೂ, ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ನೋಟೀಸ್ ಜಾರಿ ಮಾಡುತ್ತಿರುವುದು ಅರಣ್ಯವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯು ಜರುಗಿಸುವ ಕೃತ್ಯಕ್ಕೆ ಪೋಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸುತ್ತಿರುವುದು ತಾಲೂಕಾದ್ಯಂತ ಆರಣ್ಯವಾಸಿಗಳ ಚರ್ಚೆಗೆ ಕಾರಣವಾಗಿದೆ.


  ಈ ಹಿನ್ನೆಲೆಯಲ್ಲಿ ಜೋಯಿಡಾದ ತಹಶೀಲ್ದಾರ್ ಕಛೇರಿಯಲ್ಲಿ ದಿನಾಂಕ 22, ಶುಕ್ರವಾರ ಮುಂಜಾನೆ 11:30 ಕ್ಕೆ ಜರಗುವ ಮಹತ್ವದ ಸಭೆಯ ನಿರ್ಣಯಗಳು ಅರಣ್ಯವಾಸಿಗಳ ಮತ್ತು ಅರಣ್ಯ ಇಲಾಖೆಯ ನಡುವಿನ ಗೊಂದಲ ಅಂತ್ಯಕ್ಕೆ ಕಾರಣವಾಗುವುದೆಂಬ ನಿರೀಕ್ಷೆಯಿದೆ.

  300x250 AD

  ಖಂಡನೆ:
  ವಿಧಿವಿಧಾನ ಅನುಸರಿಸದೇ ಕಾನೂನು ಬಾಹಿರವಾಗಿ ಏಕಾಎಕಿಯಾಗಿ ಒಕ್ಕಲೆಬ್ಬಿಸುವ ಪ್ರಕ್ರೀಯೆ, ದೌರ್ಜನ್ಯ ಜರುಗಿಸುತ್ತಿರುವುದು ವ್ಯಾಪಕವಾಗಿ ಖಂಡನಾರ್ಹ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

  Share This
  300x250 AD
  300x250 AD
  300x250 AD
  Back to top