ಯಲ್ಲಾಪುರ: ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ತಾಲೂಕಿನ ಮಾಗೋಡ ವ್ಯಾಪ್ತಿಯ ದರ್ಬೆತಗ್ಗಿನ ನಾಟಿ ವೈದ್ಯೆ, ಸೂಲಗಿತ್ತಿ ಲಕ್ಷ್ಮೀ ಗಣಪತಿ ಸಿದ್ದಿ ಪಾತ್ರರಾಗಿದ್ದಾರೆ.
ಇವರು ಕಳೆದ 35 ವರ್ಷಗಳಿಂದ ಅನೇಕ ಹೆರಿಗೆಗಳನ್ನು ಯಾವುದೇ ಫಲಾಪೆಕ್ಷೆಯಿಲ್ಲದೆ ಯಶಸ್ವಿಯಾಗಿ ಮಾಡಿದ್ದಾರೆ. ಹಾಗೂ ಚಿಕ್ಕ ಮಕ್ಕಳಿಗೆ ಅನಾರೋಗ್ಯದ ಸಮಯದಲ್ಲಿ ನಾಟಿ ಔಷಧಿಯನ್ನು ನೀಡಿ ಗುಣ ಪಡಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಸಿದ್ದಿ ಸಮುದಾಯದ ಲಕ್ಷ್ಮೀ ಸಿದ್ದಿಯವರನ್ನು ಆಯ್ಕೆ ಮಾಡಿದೆ.