• first
  second
  third
  previous arrow
  next arrow
 • ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಲೋಕಾರ್ಪಣೆಗೊಳಿಸಿದ ಸುನೀಲ ಹೆಗಡೆ

  300x250 AD

  ಹಳಿಯಾಳ: ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಂಥವರಿಂದ ಪ್ರತಿಯೊಬ್ಬರು ಎಚ್ಚರದಿಂದಿರಬೇಕು ಎಂದು ಮಾಜಿ ಶಾಸಕ ಸುನೀಲ ಹೆಗಡೆ ಅಭಿಪ್ರಾಯಪಟ್ಟರು.

  300x250 AD


  ಇಂದು ತಾಲೂಕಿನ ಕುರಿಗದ್ದಾ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಅಶ್ವತಾರೂಢ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಕೆಲವರು ಹಿಂದೂ ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಂಡಿಬಡಗನಾಥ ಮಠದ ಶ್ರೀ ಸಾಗರನಾಥ ಮಹಾರಾಜರು ಮಾತನಾಡಿ ತಾಲೂಕಿನಲ್ಲಿ ಅಕ್ರಮ ಮಾರ್ಗಗಳ ಮೂಲಕ ವಿವಿಧ ಆಸೆ ಆಮಿಷಗಳಿಗೆ ಒಳಗಾಗಿ ಪವಿತ್ರ ಹಿಂದೂ ಧರ್ಮೀಯರು ಅನ್ಯ ಧರ್ಮಗಳಿಗೆ ಮತಾಂತರವಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಐಟಿ ಉದ್ಯಮಿ ನಾರಾಯಣ ಟೋಸುರು, ಹಳಿಯಾಳ ಪಟ್ಟಣದಲ್ಲಿರುವ ಆದಿಶಕ್ತಿ ಪೀಠದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮಿಗಳು, ಬಿಜೆಪಿ ಹಿರಿಯ ಮುಖಂಡ ಮಂಗೇಶ್ ದೇಶಪಾಂಡೆ, ತಾಲೂಕ ಬಿಜೆಪಿ ಘಟಕದ ಅಧ್ಯಕ್ಷ ಗಣಪತಿ ಕರಂಜೆಕರ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ತಾಲೂಕ ಅಧ್ಯಕ್ಷ ಚೂಡಪ್ಪಾ ಬೊಬಾಟೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

  Share This
  300x250 AD
  300x250 AD
  300x250 AD
  Back to top