• first
  second
  third
  previous arrow
  next arrow
 • ಎಸ್.ಆರ್ ಹೆಗಡೆ ಆದರ್ಶ ವೈದ್ಯರು; ಕೆ.ವಿ. ಶಿವರಾಂ

  300x250 AD

  ಶಿರಸಿ: ಡಾ. ಎಸ್. ಆರ್. ಹೆಗಡೆಯವರಲ್ಲಿ ಜ್ಞಾನ, ಕೌಶಲ್ಯ, ಶ್ರದ್ಧೆ, ವಿಶ್ವಾಸ, ಪ್ರಾಮಾಣಿಕತೆ, ತಾಳ್ಮೆ ಜೊತೆಗೆ ಅನುಕಂಪದ ಗುಣಗಳು ಇದ್ದುದರಿಂದ ಮಾದರಿ ವೈದ್ಯರಾಗಿ ಕಳೆದ 50 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬಂದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶಿರಸಿಯ ನೇತ್ರ ತಜ್ಞ ಡಾ. ಕೆ. ವಿ. ಶಿವರಾಂ ಹೇಳಿದರು.


  ಅವರು ಇಂದು ಹಿರಿಯ ವೈದ್ಯ ಡಾ. ಎಸ್. ಆರ್. ಹೆಗಡೆ ಹಾರ್ಸಿಮನೆಯವರ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

  300x250 AD


  ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ, ಸಾಗರದ ನೇತ್ರತಜ್ಞ ಡಾ. ಎಚ್. ಎಸ್. ಮೋಹನ ಮಾತನಾಡಿದರು. ಎಂ. ಎಂ. ಹೆಗಡೆ ಮಗೇಗಾರ ಸ್ವಾಗತಿಸಿದರು. ಪ್ರೊ. ಎಂ. ಕೆ. ನಾಯ್ಕ ಹೊಸಳ್ಳಿ ನಿರೂಪಿಸಿದರು. ಉದ್ಯಮಿ ಆನಂದ ಈರಾ ನಾಯ್ಕ ಹೊಸೂರು ಉಪಸ್ಥಿತರಿದ್ದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಎಸ್. ಆರ್. ಹೆಗಡೆ ದಂಪತಿಯನ್ನು ಸನ್ಮಾನಿಸಲಾಯಿತು.

  Share This
  300x250 AD
  300x250 AD
  300x250 AD
  Back to top