ಮುಂಡಗೋಡ: ಮಳೆಯಿಂದ ತಮ್ಮ ಬೆಳೆ ರಕ್ಷಿಸಲು ರಾಶಿ ಹಾಕಿರುವ ಮೆಕ್ಕೆಜೋಳವನ್ನು ತಾಡಪತ್ರೆಗಳಿಂದ ಮುಚ್ಚುತ್ತಾ, ಮತ್ತೆ ಬಿಸಿಲಿಗಾಗಿ ಕಾಯುತ್ತಿರುವ ರೈತರಿಗೆ ಮೋಡ ಕವಿದ ವಾತಾವರಣ, ಆಗಾಗ ಸುರಿವ ಮಳೆ ಆಂತಕ ಮೂಡಿಸಿದೆ.
ಎಪಿಎಂಸಿ ಆವರಣದಲ್ಲಿ ರೈತರು ಗೋವಿನಜೋಳವನ್ನು ಒಣಗಿಸಲು ಹಾಕಿದ್ದು, ಆದರೆ ದಿನಕ್ಕೆ ಒಂದೆರಡು ಬಾರಿಯಾದರೂ ಬರುವ ಮಳೆಯಿಂದ ಬೆಳೆ ಪೂರ್ಣವಾಗಿ ಒಣಗಿಸಲು ಆಗದೆ ತೊಂದರೆಪಡುತ್ತಿದ್ದಾರೆ.
ಜೋಳದ ತೆನೆಗಳಲ್ಲಿ ಅಲ್ಪ ಪ್ರಮಾಣದ ತೇವಾಂಶವಿರುತ್ತದೆ. ತೆನೆ ಕಟಾವು ಆದ ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ ಯಂತ್ರದ ಮೂಲಕ ಕಾಳನ್ನು ತೆಗೆದು ಮಾರಾಟ ಮಾಡಲಾಗುತ್ತದೆ. ಆದರೆ ತೆನೆಯನ್ನು ಕಟಾವು ಮಾಡಿ ಒಣಗಿಸಲು ಹಾಕಬೇಕೆಂದರೆ ಎರಡು ದಿನಕ್ಕೊಮ್ಮೆ ಉತ್ತಮ ಮಳೆಯಾಗುತ್ತಿದೆ ಇದರಿಂದಾಗಿ ರೈತರು ತೆನೆಯನ್ನು ಕಟಾವ್ ಮಾಡಿ ಒಣಗಿಸಲು ಸಾಧ್ಯವಾಗದೇ ಪರದಾಡುವಂತಾಗಿದೆ.