ಶಿರಸಿ: ಪೌರ ಕಾರ್ಮಿಕರು ಹಾಗು ಅನಾರೋಗ್ಯ ಪೀಡಿತರಿಗೆ ಹಣ್ಣು-ಹಂಪಲ, ಬ್ರೆಡ್ ವಿತರಿಸುವ ಮೂಲಕ ಶಿರಸಿಯ ಇಬ್ರಾಹಿಂ ಖಲೀಲುಲ್ಲಾಹ ಶಾಫಿ ಜುಮ್ಮಾ ಮಸ್ಜಿದ್ ಹಾಗು ಹಯಾತುಲ್ ಇಸ್ಲಾಂ ಶಾಫೀ ಅರಬಿಕ್ ಎಜುಕೇಶನ್ ಟ್ರಸ್ಟ್ ನವರು ಈದ್ ಮಿಲಾದ್ ಆಚರಿಸಿದರು.
ನಗರದ ಎಚ್.ಕೆ.ಎಚ್ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳು ಹಾಗೂ ನಗರಸಭೆ ಪೌರಕಾರ್ಮಿಕರಿಗೆ ಹಣ್ಣು ವಿತರಿಸಿ ಶುಭಕೋರಿದರು. ಹಯಾತುಲ್ ಶಾಫಿ ಅರಬಿಕ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಜಿ ಕೆ ಅಬ್ದುಲ್ ಕರಿಂ ಮಾತನಾಡಿ, ಮಹಮ್ಮದ್ ಪೈಗಂಬರ ಮಹ್ಮದ್ ಅವರ ಜನ್ಮ ದಿನದ ಪ್ರಯುಕ್ತ ಮುಸಲ್ಮಾನರು ಈದ್ ಉಲ್ ಪೀತರ್ ಹಬ್ಬವನ್ನು ಆಚರಿಸುತ್ತಾರೆ. ಜಗತ್ತಿಗೆ ಶಾಂತಿಯ ಮಹತ್ವ ಸಾರಿದ ಪೈಗಂಬರ್ ಅವರ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮುನೀರ್ ಅಹ್ಮದ್ ಎಚ್.ಕೆ.ಎಚ್ ಉಮರುಲ್ ಫಾರುಖ್ ಮದನಿ, ಕೆ ಅಬ್ದುಲ್ ಹಮೀದ್, ಎಮ್ ಕೆ ಮಹ್ಮದ್, ತಲ್ಹತ್ ಹುದವಿ, ಸಹೀದ್ ಹುದವಿ, ಕಲಂದರ ಹುದವಿ, ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು.