• first
    second
    third
    previous arrow
    next arrow
  • ಅಂಕುರ ಸಾಹಿತ್ಯ ವೇದಿಕೆಯಿಂದ ರಾಜ್ಯ ಮಟ್ಟದ ಕವನ ರಚನಾ ಸ್ಪರ್ಧೆ

    300x250 AD

    ಶಿರಸಿ: ತಾಲೂಕಿನ ಹುಲೇಕಲ್ಲಿನ ಶ್ರೀದೇವಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಅಂಕುರ ಸಾಹಿತ್ಯ ವೇದಿಕೆಯು ಈ ವರ್ಷ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಆಯೋಜಿಸಿದೆ.


    ಕಳೆದ ಎಂಟು ವರ್ಷಗಳಿಂದ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಆಯೋಜಿಸುವುದು ಮತ್ತು ಕಾವ್ಯಾಂಕುರ ಎಂಬ ಕವನ ರಚನಾ ಕಾರ್ಯಾಗಾರವನ್ನು ನಡೆಸಿ ಆ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಈ ಮೂಲಕ ವಿದ್ಯಾರ್ಥಿಗಳು ಬರೆದ ರಚನೆಗಳನ್ನು ಆಯ್ದು ಸಂಪಾದಿಸಿ ಅಂಕುರ ಹೆಸರಿನಲ್ಲಿ ಕವನ ಸಂಕಲನ ಪ್ರಕಟಿಸಲಾಗುತ್ತಿದೆ. ಇದುವರೆಗೆ ಎಂಟು ಕವನ ಸಂಕಲನಗಳು ರೂಪುಗೊಂಡಿದ್ದು ಇದೀಗ ಒಂಬತ್ತನೆಯ ವರ್ಷದಲ್ಲಿ ಮುನ್ನಡೆಯುತ್ತಿದೆ.

    300x250 AD

    ರಾಜ್ಯಮಟ್ಟಕ್ಕೆ ವಿಸ್ತರಣೆ: ಸಾತ್ವಿಕ ಚಳುವಳಿಯಂತೆ ಸಾಗಿಬಂದ ಈ ಪ್ರಯತ್ನಕ್ಕೆ ವಿದ್ಯಾರ್ಥಿಗಳಿಂದ ದೊರೆತ ಪ್ರತಿಸ್ಪಂದನವು ಅಪೂರ್ವವಾಗಿದೆ. ಈಗ ಈ ಚಟುವಟಿಕೆಯನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸಿ ಸಾಹಿತ್ಯಾಸಕ್ತ ವಿದ್ಯಾರ್ಥಿ ಪ್ರತಿಭೆಗಳನ್ನು ತಲುಪಬೇಕು ಎಂಬುದಾಗಿ ಈ ವರ್ಷ ಮೊದಲ ಬಾರಿಗೆ ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆ ಆಯೋಜಿಸಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಲ್ಲಿ ಮುಕ್ತ ಅವಕಾಶ. ಪ್ರತಿ ವಿದ್ಯಾರ್ಥಿಯು ಕೈಬರಹದ ಅಥವಾ ಮುದ್ರಿತವಾದ ಸ್ವರಚಿತ ಎರಡು ಕವನಗಳನ್ನು ಕಳಿಸಬಹುದು. ರಚನೆ ಸ್ವಂತದ್ದಾಗಿರಲಿ, ಕೃತಿಚೌರ್ಯ ಆಗಿರಬಾರದು. ಕವನದ ಪ್ರತಿಯ ಮೇಲೆ ಪ್ರಾಚಾರ್ಯರ ಸಹಿ ಅವಶ್ಯಕ. ಇಂಥಹ ಪ್ರತಿಯನ್ನು ನ.1 ರೊಳಗೆ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಹುಲೇಕಲ್, ಶಿರಸಿ, ಉ.ಕ ಈ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Back to top