• Slide
    Slide
    Slide
    previous arrow
    next arrow
  • ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ‘ಕಲಿಕಾರ್ಥಿ ಸಹಾಯ ಕೇಂದ್ರ’ ಪ್ರಾರಂಭ

    300x250 AD

    ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮಹಾ ವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ‘ಕಲಿಕಾರ್ಥಿ ಸಹಾಯ ಕೇಂದ್ರ’ ಪ್ರಾರಂಭಿಸಲು ಅನುಮತಿ ದೊರೆತಿದೆ.


    ದೂರ ಶಿಕ್ಷಣ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಪಡೆಯುವವರಿಗೆ ಈ ಕಲಿಕಾ ಕೇಂದ್ರ ನೆರವಾಗಲಿದೆ. ಪದವಿ, ಸ್ನಾತಕೋತರ ಪದವಿಗೆ ಸಂಬಂಧಿಸಿ ಬಿ.ಎ, ಬಿ.ಕಾಂ, ಬಿ.ಲಿಬ್, ಬಿ.ಬಿ.ಎ ಹಾಗೂ ಬಿ.ಎಸ್ಸಿ ಪ್ರವೇಶ ಬಯಸುವ ಅಭ್ಯರ್ಥಿಗಳು ಇಲ್ಲಿ ದಾಖಲಾಗಬಹುದಾಗಿದೆ. ಸ್ನಾತಕೋತರ ಪದವಿಗೆ ಸಂಬಂಧಿಸಿ ಎಂ.ಎ, ಎಂ.ಕಾಂ, ಎಂ.ಲಿಬ್ ಹಾಗೂ ಎಂ.ಎಸ್.ಇ ಕಲಿಕಾ ಕೇಂದ್ರವನ್ನು ತೆರೆಯಲಾಗಿದೆ.

    300x250 AD


    ಪದವಿ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅಂಕಪಟ್ಟಿ, ಆಧಾರ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಪ್ರತಿಗಳ ಜೊತೆ ಮೊಬೈಲ್ ನಂ ಹಾಗೂ ಇಮೇಲ್ ಐಡಿ ಅನ್ನು ಒದಗಿಸಬೇಕಿದೆ. ಸ್ನಾತಕೋತರ ಪದವಿಗೆ ಪ್ರವೇಶ ಪಡೆಯುವವರು ಈ ಎಲ್ಲಾ ದಾಖಲೆಗಳ ಜೊತೆ ಪದವಿ ಅಂಕಪಟ್ಟಿಯನ್ನು ಒದಗಿಸಬೇಕಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯ. ಆಸಕ್ತ ಅಭ್ಯರ್ಥಿಗಳು ನ. 18ರ ಒಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಹಾಯವಾಣಿ ಸಂಖ್ಯೆ: 7337875279 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top