ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಗೌರವಾನ್ವಿತ ಹಾಗು ಹಿರಿಯ ಜನನಾಯಕ ಡಾ. ಎಮ್. ಪಿ. ಕರ್ಕಿ ಅವರ ನಿಧನದ ಸುದ್ದಿ ತುಂಬಾ ಆಘಾತಕಾರಿಯಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾರ್ಥಿಸಿದ್ದಾರೆ.
ಕರ್ಕಿಯವರು ಜನಪ್ರಿಯ ವೈದ್ಯರೂ, ಕಳಕಳಿಯ ಮುಖಂಡರೂ, ಪ್ರಾಮಾಣಿಕ ಸಾಮಾಜಿಕ ನೇತಾರರೂ ಹಾಗೂ ಶಿಕ್ಷಣಪ್ರೇಮಿಗಳೂ ಆಗಿದ್ದ ಅವರ ಸಾವು ನಿಜಕ್ಕೂ ಜಿಲ್ಲೆಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಹೇಳಿದ್ದಾರೆ.