ಶಿರಸಿ: ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಗೆ ಕವಿ ರಾಜೀವ ಅಜ್ಜೀಬಳ ಆಯ್ಕೆ ಆಗಿದ್ದಾರೆ.
ಶಿರಸಿಯ ಸಾಹಿತ್ಯ ಸಿಂಚನ ಬಳಗ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ಮೊದಲ ವರ್ಷದ ಪ್ರಶಸ್ತಿಗೆ ಪತ್ರಕರ್ತ ರಾಜೀವ ಅಜ್ಜೀಬಳ ಅವರು ಆಯ್ಕೆಯಾಗಿದ್ದಾರೆ.
ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ರೈತಭವನದಲ್ಲಿ ಅ. 23 ರಂದು ಮಧ್ಯಾಹ್ನ 3 ಗಂಟೆಗೆ ಸಾಹಿತ್ಯ ಸಿಂಚನ ಬಳಗ ಹಮ್ಮಿಕೊಂಡಿರುವ ದಸರಾ ಕವಿ ಮಿಲನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮವನ್ನು ಟೀಂ ಪರಿವರ್ತನೆ ಸಂಸ್ಥಾಪಕ ಹಿಂತೇಂದ್ರ ನಾಯ್ಕ್ ಉದ್ಘಾಟಿಸಲಿದ್ದಾರೆ. ಬರಹಗಾರ ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಾಹಿತಿ ಮೋಹನ ಭರಣಿ ಭಾಗವಹಿಸಲಿದ್ದಾರೆ ಎಂದು ಸಾಹಿತ್ಯ ಸಿಂಚನ ಬಳಗದ ಅಧ್ಯಕ್ಷ ಶಿವಪ್ರಸಾದ ಹಿರೇಕೈ ತಿಳಿಸಿದ್ದಾರೆ.