ಹಳಿಯಾಳ: ತಾಲೂಕಿನ ದೊಡ್ಡಕೊಪ್ಪ ಗ್ರಾಮದ ಕುಮಾರಿ ಲೀನಾ ಸಿದ್ದಿ 65 ಕೆ.ಜಿ.ವಿಭಾಗದಲ್ಲಿ ಹಾಗೂ ಸಾತನಳ್ಳಿ ಗ್ರಾಮದ ಕುಮಾರಿ ಸುಜಾತಾ ಪಾಟೀಲ್ 68ಕೆ.ಜಿ.ವಿಭಾಗದಲ್ಲಿ ರಾಷ್ಟ್ರ ಮಟ್ಟದ ಕುಸ್ತಿ ಆಯ್ಕೆ ಪ್ರಕ್ರಿಯೆಗಾಗಿ ಉತ್ತರ ಪ್ರದೇಶದ ಗೊಂಡಾಗೆ ತೆರಳಲು ಸಿದ್ಧತೆ ನಡೆಸುತ್ತಿರುವುದು ಶಾದಾಯಕ ಬೆಳವಣಿಗೆಯಾಗಿದೆ.
ಗದಗ’ದಲ್ಲಿ ಅ.17 ರಂದು ನಡೆದ ರಾಜ್ಯ ಮಟ್ಟದ ಕುಸ್ತಿ ತಂಡದ ಆಯ್ಕೆ ಟ್ರಯಲ್ಸ್ ನಲ್ಲಿ ಭಾಗವಹಿಸಿ ಕರ್ನಾಟಕವನ್ನು ಪ್ರತಿನಿಧಿಸಲು ಈ ಇಬ್ಬರು ಉದಯೋನ್ಮುಖ ಕ್ರೀಡಾ ಪಟುಗಳು ಆಯ್ಕೆಯಾಗಿರುವುದು ವಿಶೇಷ. ಹಳಿಯಾಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುಸ್ತಿ ಅಖಾಡದಲ್ಲಿ ತರಬೇತಿ ಪಡೆಯುತ್ತಿರುವ ಈ ಯುವ ಕುಸ್ತಿಪಟುಗಳು ದೇಶದ ಕೀರ್ತಿಯನ್ನು ಬೆಳಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.