ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಮಿನಿ ಬಸ್ ವೊಂದು ಗೇರುಸೊಪ್ಪಾದ ಬಂಗಾರ ಕುಸುಮ ಫಾಲ್ಸ್ ಬಳಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಎಲ್ಲಾ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನದಲ್ಲಿ 16 ಪ್ರವಾಸಿಗರು ಇದ್ದರು. ಇವರಲ್ಲಿ ಏಳು ಜನರಿಗೆ ಗಾಯಗಳಾಗಿವೆ.
ಪ್ರವಾಸಿಗರು ಚಾಮರಾಜನಗರದಿಂದ ಮುರ್ಡೇಶ್ವರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಬಂಗಾರಕುಸುಮ ಫಾಲ್ಸ್ ಬಳಿ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.