ಕಾರವಾರ: ನಗರದ ಹಬ್ಬುವಾಡಾದ ಮಟ್ಕಾ ಅಡ್ಡೆಯ ಮೇಲೆ ನಗರ ಪೆÇಲೀಸರು ದಾಳಿ ನಡೆಸಿದ್ದಾರೆ.
ನಗರ ಠಾಣಾ ಪೆÇಲೀಸರು 1950 ರೂ.ನೊಂದಿಗೆ ಜೂಜ ಜಾಟಕ್ಕೆ ಬಳಸಿದ ಪರಿಕರಗಳನ್ನು ವಶಕ್ಕೆ ಪಡೆದು ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಿಸಿದ ಘಟನೆ ನಗರದ ಹಬ್ಬುವಾಡದ ಮಡಿವಾಳ ವಾಡಾದಲ್ಲಿ ನಡೆದಿದೆ. ಬಂಧಿತ ವ್ಯಕ್ತಿಯನ್ನು ಪಟಗಾರ ಎಂದು ತಿಳಿದು ಬಂದಿದೆ. ಈತ 1ರು.ಗೆ 80 ರೂ. ನೀಡುವ ಶರತ್ತಿನೊಂದಿಗೆ ಮಟಕಾ ಜೂಜಾಟದಲ್ಲಿ ತೊಡಗಿದ್ದ ಎನ್ನಲಾಗಿದೆ. ಈತನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ಮುಂದುವರೆಸಿದ್ದಾರೆ.