ಶಿರಸಿ: ಮನುವಿಕಾಸ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ ಕೆರೆ ಸಮಾವೇಶವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ಕಳೆದ ಎರಡು ದಶಕದ ಹಿಂದೆ ಪ್ರಾರಂಭವಾದಚಿಕ್ಕ ಸಂಸ್ಥೆಯಾಗಿದ್ದು, ತನ್ನಕಾರ್ಯವೈಖರಿಯಿಂದಇಂದು ತಳಮಟ್ಟದ ಜನಸಮುದಾಯವನ್ನುತಲುಪಿದೆ. ರೈತಾಪಿ ವರ್ಗಕ್ಕೆ ಮನುವಿಕಾಸ ನೀಡಿದ ಕೊಡುಗೆ ಅಪಾರವಾಗಿದ್ದು ನೀರಿನ ದಾಹವನ್ನು ನೀಗಿಸಿದೆ. ದೇಶದಲ್ಲಿ ಅನ್ನದಾತ ಮತ್ತು ಸೈನಿಕ ಈ ಇಬ್ಬರನ್ನು ಸಮಾಜ ಬಹಳ ಗೌರವದಿಂದ ಕಾಣಲು ಈ ಎರಡು ಸಮುದಾಯಗಳು ಜನಸಮುದಾಯಕ್ಕೆ ಮತ್ತು ಭದ್ರತೆಗೆ ನೀಡಿರುವ ಕೊಡುಗೆಗಳೇ ಸಾಕ್ಷಿಯಾಗಿವೆ ಎಂದರು.
ಕೋವಿಡ್-19 ರತುರ್ತು ಸಮಯದಲ್ಲಿರಾಷ್ಟ್ರವ್ಯಾಪಿ ಲಾಕ್ಡೌನ್ ಸಮಯದಲ್ಲಿ ಉಳಿದ ಎಲ್ಲ ಸ್ಥರದ ಸಮುದಾಯಗಳು ಕೆಲಸವನ್ನು ನಿಲ್ಲಿಸಿದ್ದರೂ ಸಹ ರೈತಾಪಿಕುಟುಂಬ ಮಾತ್ರತನ್ನ ಕಸುಬನ್ನು ಬಿಟ್ಟುಕೂತಿರಲಿಲ್ಲ. ಅವರ ಪರಿಶ್ರಮವನ್ನು ಮನಗಂಡು ಮನುವಿಕಾಸ ಸಂಸ್ಥೆಯುಚಟುವಟಿಕೆಗಳನ್ನು ರೂಪಿಸಿದ್ದು, ಸಂಸ್ಥೆ ಅವರಿಗೆಅತ್ಯಾವಶ್ಯಕವಾದಜೀವಜಲದ ಪೂರೈಕೆಯನ್ನು ಮಾಡಿದ್ದುನಿಜವಾಗಿಯೂ ಶ್ಲಾಘನೀಯವೇ ಸರಿ,ಕೆರೆಗಳ ಪುನರುಜ್ಜೀವನದಜೊತೆಗೆರೈತರ ಬೆಳೆಗಳಲ್ಲಿ ಬದಲಾವಣೆ, ಆರ್ಥಿಕಅಭಿವೃದ್ದಿಯಜೊತಗೆಜೀವನಮಟ್ಟ ಸುಧಾರಣೆ ಮಾಡಿದಕೀರ್ತಿ ಮನುವಿಕಾಸಕ್ಕೆ ಸಲ್ಲುತ್ತದೆ.
ಈ ಸಂದರ್ಭದಲ್ಲಿ ಮನು ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಗಣಪತಿ ಭಟ್, ಡಿವೈಎಸ್ ಪಿ ರವಿ ನಾಯ್ಕ, ಜಿಲ್ಲೆಯ ಹಾಗೂ ಹಾವೇರಿ ಜಿಲ್ಲೆಯ ಪ್ರಗತಿಪರ ರೈತರ, ಕೃಷಿಕರು ಉಪಸ್ಥಿತರಿದ್ದರು.