• first
  second
  third
  previous arrow
  next arrow
 • ಹಿಂದೂಗಳ ಮೇಲೆ ಆಕ್ರಮಣ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ; ಪ್ರಧಾನಿಗೆ ಮನವಿ

  300x250 AD

  ಕಾರವಾರ: ಬಾಂಗ್ಲಾದೇಶದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾಪೂಜೆಯ ಸಾವಿರಾರು ಮಂಟಪಗಳನ್ನು ಮತ್ತು `ಇಸ್ಕಾನ್’ ನ ಮಂದಿರದ ಮೇಲೆ ಆಕ್ರಮಣ ನಡೆಸಿದ ಹಾಗೂ ಹಿಂದೂಗಳ ಮೇಲೆ ಸಶಸ್ತ್ರ ಆಕ್ರಮಣ ನಡೆಸಿ ಹತ್ಯಾಕಾಂಡ ನಡೆಸಿದ ಮತಾಂಧರ ಮೇಲೆ ಕಠೋರ ಕ್ರಮಕೈಗೊಳ್ಳಬೇಕೆಂದು ಇಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕಾರವಾರದ ಜಿಲ್ಲಾಧಿಕಾರಿಗಳ ಹಾಗೂ ಶಿರಸಿಯ ಸಹಾಯಕ ಆಯುಕ್ತರ ಹಾಗೂ ಕುಮಟಾದ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಹಾಗೂ ಭಾರತ ಸರ್ಕಾರದ ವಿದೇಶಾಂಗ ಸಚಿವರಿಗೆ ಮನವಿ ನೀಡಲಾಯಿತು.

  ಬಾಂಗ್ಲಾದೇಶದ ನೊವಾಖಾಲಿಯಲ್ಲಿ ಶುಕ್ರವಾರದ ನಮಾಜನ ನಂತರ ಇಸ್ಕಾನ್' ಮಂದಿರದ ಮೇಲೆ 200 ಕ್ಕಿಂತಲೂ ಹೆಚ್ಚು ಮತಾಂಧರು ದಾಳಿ ನಡೆಸಿದರು. ಅದರಲ್ಲಿಇಸ್ಕಾನ್’ ಮಂದಿರದ ಇಬ್ಬರು ಸಾಧುಗಳಾದ ನಿತಾಯಿ ದಾಸಪ್ರಭು ಮತ್ತು ಜತನ ದಾಸ ಪ್ರಭು ಹಾಗೂ 25 ವರ್ಷದ ಭಕ್ತ ಪಾರ್ಥ ದಾಸರನ್ನು ಭೀಬತ್ಸವಾಗಿ ಹತ್ಯೆ ಮಾಡಲಾಗಿದೆ. ಹೀಗೆ ಅನೇಕ ಅಹಿತಕರ ಘಟನೆಗಳು ಘಟಿಸುತ್ತಿದೆ ಈ ದೃಷ್ಟಿಯಿಂದ ಬಾಂಗ್ಲಾದೇಶದ ಹಿಂದೂ ಸಮಾಜಕ್ಕೆ ಸುರಕ್ಷೆಯನ್ನು ಪ್ರದಾನಿಸಲು ಭಾರತ ಸರಕಾರವು ತಕ್ಷಣ ಬಾಂಗ್ಲಾದೇಶದ ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಬೇಕು, ಹಿಂದೂಗಳ ಮೇಲೆ ಹಿಂಸಾತ್ಮಕ ಆಕ್ರಮಣ ನಡೆಸುವ ಮೂರ್ತಿಗಳನ್ನು ಒಡೆಯುವವರನ್ನು, ದುರ್ಗಾಪೂಜೆಯ ಮಂಟಪವನ್ನು ಹಾಳುಗೆಡಹಿದ ಮತಾಂಧರನ್ನು ಹುಡುಕಿ ತೆಗೆಯಬೇಕು ಮತ್ತು ಅವರ ಮೇಲೆ ಹಾಗೂ ಅವರ ಸಊತ್ರಧಾರರ ಮೇಲೆ ಕಠೋರ ಕಾನೂನು ಕ್ರಮ ಕೈಗೊಳ್ಳಬೇಕು ಅಲ್ಲದೇ ಹಿಂದೂಗಳಿಗೆ ರಕ್ಷಣೆಯನ್ನು ಒದಗಿಸದಿದ್ದರೆ ಅಥವಾ ಇದೇ ಸ್ಥಿತಿಯು ಮುಂದುವರೆದರೆ ಬಾಂಗ್ಲಾದೇಶದೊಂದಿಗಿನ ಎಲ್ಲ ಸಂಬಂಧಗಳನ್ನು ಮುರಿಯಲಾಗುವುದು ಜೊತೆಗೆ ಅವರ ಮೇಲೆ ನಿರ್ಬಂಧವನ್ನು ಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಸಹ ಬಾಂಗ್ಲಾದೇಶಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನು ಮಾಡಲಾಯಿತು.

  300x250 AD


  ಕಾರವಾರದಲ್ಲಿ ಸಮಿತಿಯ ಸೋಮೇಶ್ ಗುರವ, ಸಾಗರ ಕುರ್ಡೆಕರ ಹಾಗೂ ಶಿರಸಿಯಲ್ಲಿ ನಗರಸಭಾ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸಮಿತಿಯ ಶ್ರೀಕಾಂತ್ ಪೂಜಾರಿ, ಕುಮಾಟದಲ್ಲಿ ಸಮಿತಿಯ ಸಂದೀಪ್ ಭಂಡಾರಿ, ಸತೀಶ್ ಶೇಟ್ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top