• first
  second
  third
  previous arrow
  next arrow
 • ಯೋಗ್ಯ ಮಾನದಂಡವಿರದ ಪ್ರಶಸ್ತಿಗೆ ಬೆಲೆಯಿಲ್ಲ; ಸುಬ್ರಾಯ ಭಟ್

  300x250 AD

  ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ, ಸಾಹಿತ್ಯ ಚಿಂತನ ಚಾವಡಿ, ಶಿರಸಿ ಇವರ ಆಶ್ರಯದಲ್ಲಿ ದಸರಾ ಕವಿಗೋಷ್ಟಿ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿದ ಸುಬ್ರಾಯ ಭಟ್ ಬಕ್ಕಳರವರು ಮಾತನಾಡಿ, ಇಂದು ಬರೆದ ಕವಿತೆಗೆ ತಕ್ಷಣ ಪ್ರತಿಕ್ರಿಯೆ, ಪ್ರಶಸ್ತಿ ಲಭಿಸುತ್ತದೆ. ಇದಕ್ಕೆ ಯೋಗ್ಯ ಮಾನದಂಡ ಇರಬೇಕಾದ ಅಗತ್ಯತೆ ಇದೆ. ಪ್ರಶಸ್ತಿಗಳ ಹಪಾಹಪಿ ಮತ್ತದರ ಬೆನ್ನುಬಿದ್ದು ಲಾಬಿ ಮೂಲಕ ಬೆಳಕಿಗೆ ಬಂದವರು ನೈಜ ಸಾಹಿತಿಗಳಾಗಲಾರರು. ಸಂಘಟನೆಗಳು ಪ್ರತಿಭೆ ಇರುವ ಕವಿ ಬೆಳಕಿಗೆ ತರುವ ಪ್ರಯತ್ನ ಮಾಡಬೇಕಿದೆ.

  ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ವಿಜಯನಳಿಸಿ ರಮೇಶರವರು ಮಾತನ್ನಾಡಿ, ಎಸ್.ಎಸ್.ಭಟ್ ಮಾರ್ಗದರ್ಶನದಿಂದ ಸಾಹಿತ್ಯ ಚಿಂತಕರ ಬಳಗವು ಎಲೆಮರೆಯ ಪ್ರತಿಭೆಗಳಿಗೆ ಅವಕಾಶಗೈವ ಕಾರ್ಯ ಅಮೋಘವೇ ಸರಿ. ಸಾಹಿತ್ಯ ಅದ್ಭುತ ದೈವಿದತ್ತ ಕೊಡುಗೆ. ಸಾಹಿತ್ಯವನ್ನು ಓದಿ ಅರ್ಥೈಸಿ ಅನುಭವಿಸುವ ಪರಮಾನಂದ ಮತ್ಯಾವ ಅಷ್ಟೈಶ್ವರ್ಯದಿಂದಲೂ ದೊರೆಯದು. ಹಳಗನ್ನಡವು ಭಯಾನಕ ಎಂದು ಹಿಂಜರಿತ ಬೇಡ. ಅದನ್ನೋದಿ ಆಸ್ವಾದಿಸುವ ಮನಸ್ಸು ಮಾಡಬೇಕು ಎಂದರು.


  ಬಳಗವು ಆಯೋಜಿಸಿದ್ದ ಸಾಂಪ್ರದಾಯಿಕ ತಿಹಿತಿಂಡಿ ಮತ್ತು ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ಮತ್ತು ಕವಿಗಳಿಗೆ ನೆನಪಿನ ಕಾಣಿಕೆ ವಿತರಿಸಿ ಮಾತನ್ನಾಡಿದ ಬರಹಗಾರ ದಿವಸ್ಪತಿ ಭಟ್ ಮಾತನ್ನಾಡಿ, ಎದೆಯಲ್ಲಿ ಹುದುಗಿದ್ದ ಭಾವನೆಗಳಿಗೆ ಅಕ್ಷರರೂಪ ಕೊಡುವ ಶಕ್ತಿ ಕಾವ್ಯಾಸಕ್ತರಿಗೆ ಮಾತ್ರ ಸಾಧ್ಯ. ಸಾಹಿತ್ಯವು ಪ್ರಶಸ್ತಿ, ಸನ್ಮಾನಗಳನ್ನು ಪಡೆಯುದಕ್ಕಲ್ಲ ಬದಲಿಗೆ ನಮ್ಮನ್ನು ನಾವು ನೋಡಿಕೊಳ್ಳುವುದೇ ಸಾಹಿತ್ಯ. ಸಾಹಿತ್ಯ ನಮ್ಮೊಳಗಿನ ವ್ಯಕ್ತಿತ್ವವನ್ನು ಬದಲಾಯಿಸಬಹುದು. ಅಂತಹ ಅದ್ಬುತ ಶಕ್ತಿ ಸಾಹಿತ್ಯಕ್ಕಿದೆ ಎಂದರು.

  300x250 AD


  ನಂತರ ಸುಮಾರು 30ಕ್ಕೂ ಅಧಿಕ ಕವಿ ಕವಯತ್ರಿಗಳು ತಮ್ಮ ಸ್ವರಚಿತ ಕವಿತೆ, ಚುಟುಕು, ಹನಿಗವನಗಳನ್ನು ವಾಚಿಸಿದರು.

  ಸಾಂಪ್ರದಾಯಿಕ ಅಡಿಗೆ ಸ್ಪರ್ಧೆಯಲ್ಲಿ ನಿರ್ಮಲಾ ಹೆಗಡೆ-ಪ್ರಥಮ, ವಿಮಲಾ ಭಾಗ್ವತ-ದ್ವಿತೀಯ, ಶ್ರೀಮತಿ ಹೆಗಡೆ-ತೃತೀಯ, ಶೋಭಾ ಭಟ್ಟ ಮತ್ತು ಕ್ಷಮಾ ಹೆಗಡೆ ಸಮಾಧಾನಕರ ಬಹುಮಾನ ಪಡೆದರು.
  ಕಥಾ ಸ್ಪರ್ಧೆಯಲ್ಲಿ ಪ್ರಥಮ ಸೀತಾರಾಮ ಕಾನಳ್ಳಿ, ದ್ವಿತೀಯ ಶೋಭಾ ಭಟ್ಟ, ತೃತೀಯ ರೇವತಿ ಭಟ್ಟ ಉಳಿದಂತೆ ರಾಜೂ ನಾಯ್ಕ, ವಿಮಲಾ ಭಾಗ್ವತ, ಎಸ್ ಎಸ್ ಭಟ್ಟ, ಗಣೇಶ ಬಿಳೆಕಲ್, ಭಾರತಿ ಹೆಗಡೆ, ಭಾರತಿ ಗೌಡ, ವಿಜಯಾ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದರು. ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕ ಎಸ್.ಎಸ್.ಭಟ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

  ಆರಂಭದಲ್ಲಿ ಕವಯತ್ರಿ ವಿಮಲಾ ಭಾಗ್ವತ್ ಪ್ರಾರ್ಥನಾ ಗೀತೆ ಹಾಡಿದರು. ಕಥೆಗಾರ ಕೆ.ಮಹೇಶ ಸರ್ವರನ್ನೂ ಸ್ವಾಗತಿಸಿದರು. ಕವಿ ರಾಜೂ ನಾಯ್ಕ ಬಿಸಲಕೊಪ್ಪ ಪ್ರಾಸ್ತಾವಿಕ ಮಾತನ್ನಾಡಿದರು. ಕವಯತ್ರಿ, ಶಿಕ್ಷಕಿ ವಿಜಯ ಶಾನಭಾಗ ತಮ್ಮ ವಿನೂತನ ಸಾಹಿತ್ಯಭರಿತವಾಗಿ ಇಡೀ ಕಾರ್ಯಕ್ರವನ್ನು ನಿರೂಪಣೆ ಮಾಡಿ ಪ್ರೇಕ್ಷಕರನ್ನು ಗೆದ್ದರು. ಕೊನೆಯಲ್ಲಿ ದತ್ತಗುರು ಕಂಠಿ ವಂದಿಸಿದರು.

  Share This
  300x250 AD
  300x250 AD
  300x250 AD
  Back to top