ನವದೆಹಲಿ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದು, ಮಂದಿರದ ಅಡಿಪಾಯದ ಮೊದಲ ಹಂತದ ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಎರಡನೇ ಹಂತದ ನಿರ್ಮಾಣ ನವೆಂಬರ್ ಮಧ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ಡಿಸೆಂಬರ್ 2023 ರಿಂದ ‘ಗರ್ಭಗೃಹ’ದಲ್ಲಿ ಭಕ್ತರು ಶ್ರೀರಾಮನ ದರ್ಶನ ಪಡೆಯಬಹುದಾಗಿದೆ ಎಂದು ರಾಯ್ ಮಾಹಿತಿ ನೀಡಿದ್ದಾರೆ. ಮಂದಿರವು 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರದಲ್ಲಿದೆ ಎಂದು ವರದಿಗಳು ತಿಳಿಸಿವೆ. ಬ ಲಾರ್ಸನ್ ಮತ್ತು ಟ್ಯೂಬ್ರೊ (ಎಲ್ & ಟಿ) ಇದರ ನಿರ್ಮಾಣ ಕಾರ್ಯವನ್ನು ನಡೆಸುತ್ತಿದೆ.
ಭವ್ಯ ರಾಮಮಂದಿರ 1,500 ವರ್ಷಗಳ ಕಾಲ ಸಂರಕ್ಷಿತವಾಗಿರಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದರ ಅಡಿಪಾಯವನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದೆ.
2023 ರ ಅಂತ್ಯದ ವೇಳೆಗೆ ‘ರಾಮಲಾಲ’ ಮೂರ್ತಿಯನ್ನು ‘ಗರ್ಭಗೃಹ’ದಲ್ಲಿ ಸ್ಥಾಪಿಸಲಾಗುತ್ತದೆ. ಅಡಿಪಾಯ ಹಾಕುವ ಸಂಪೂರ್ಣ ಪ್ರಕ್ರಿಯೆಯನ್ನು ಸುಮಾರು 20 ಪದರಗಳಲ್ಲಿ ಸುತ್ತುವರಿಯಲಾಗಿದೆ.
ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಕಾರ್ಯವು ವೇಗದಲ್ಲಿ ಮುಂದುವರಿಯುತ್ತಿದೆ. ಡಿಸೆಂಬರ್ 2023 ರಿಂದ ಭಕ್ತರು ಗರ್ಭ ಗೃಹದಲ್ಲಿ ಭಗವಾನ್ ರಾಮನ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಮೊದಲ ಹಂತದ ಅಡಿಪಾಯದ ಕೆಲಸ ಮುಗಿದಿದೆ, ಎರಡನೇ ಹಂತ ನವೆಂಬರ್ ಮಧ್ಯದ ವೇಳೆಗೆ ಮುಗಿಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ದೃಢಪಡಿಸಿದೆ.
ನ್ಯೂಸ್ 13