ಭಟ್ಕಳ: ಟಿ.ಟಿ ಹಾಗೂ ಇನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಕಾಯ್ಕಿಣಿ ಪಂಚಾಯತ್ ವ್ಯಾಪ್ತಿಯ ಕ್ಯಾಂಟೀನ್ ಸಮೀಪ ನಡೆದಿದೆ.
ಗೋವಾ ಮೂಲದ ಇನೋವಾ ಕಾರೊಂದು ಮುರುಡೇಶ್ವರ ಪ್ರವಾಸ ಮುಗಿಸಿ ಭಟ್ಕಳದ ಕಡೆಗೆ ತೆರಳುವ ವೇಳೆ ಅದೇ ಮಾರ್ಗದಲ್ಲಿ ಬೆಂಗಳೂರು ಮೂಲದ ಟಿ. ಟಿ ವಾಹನ ಮುರುಡೇಶ್ವರದಿಂದ ಭಟ್ಕಳದ ಕಡೆ ತೆರಳುವ ವೇಳೆ ಇನೋವಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿ ಸಂಭವಿಸಿದ ರಭಸಕ್ಕೆ ಇನೋವಾ ಕಾರು ರಸ್ತೆಯ ಡಿವೈಡರ್ ಮೇಲೆ ಹತ್ತಿದೆ. ಈ ಅಪಘಾತದಲ್ಲಿ ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.