• first
    second
    third
    previous arrow
    next arrow
  • ಟಿ.ಎಮ್.ಎಸ್‌ನಲ್ಲಿ ಅ.24ರಿಂದ ತಾಳಮದ್ದಲೆ ಸಪ್ತಾಹ

    300x250 AD

    ಶಿರಸಿ: ಸತತ 6 ವರ್ಷಗಳಿಂದ ಯಕ್ಷ ಸಂಭ್ರಮ ಟ್ರಸ್ಟ್ (ರಿ) ತಾಳಮದ್ದಲೆ ಸಪ್ತಾಹ ಆಚರಿಸುತ್ತಾ ಬಂದಿದ್ದು, 7ನೇ ವರ್ಷದ ಸಪ್ತಾಹವನ್ನು ಇದೇ ಅಕ್ಟೋಬರ್ 24 ರ ರವಿವಾರದಿಂದ 30 ಶನಿವಾರದವರೆಗೆ ಶಿರಸಿ ಟಿ.ಎಮ್.ಎಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ.


    ಟ್ರಸ್ಟನ್ನು ಹಲವು ವರ್ಷದಿಂದ ಮುನ್ನಡೆಸಿಕೊಂಡು ಬಂದಿದ್ದ ಪ್ರೋ.ಎಂ.ಎ.ಹೆಗಡೆ ಯವರ ಅಗಲುವಿಕೆ ನಮಗೆಲ್ಲ ಭರಿಸಲಾಗದ ನಷ್ಟವಾಗಿದ್ದು ಅವರ ಸ್ಮರಣೆಯಲ್ಲಿ ಈ ಸಪ್ತಾಹವನ್ನು ‘ಮಹಾಬಲ ಸಪ್ತಕ’ ಎಂದು ಅವರಿಗೆ ಅರ್ಪಿಸುತ್ತಿದ್ದೇವೆ. ಯಕ್ಷಗಾನ, ತಾಳಮದ್ದಳೆ ಕ್ಷೇತ್ರದ ಹಲವಾರು ಸುಪ್ರಸಿದ್ಧ ಕಲಾವಿದರು ಭಾಗವಹಿಸುತ್ತಿದ್ದು ಸತೀಶ ಶೆಟ್ಟಿ ಪಟ್ಲ, ಕಾವ್ಯಶ್ರೀ ಅಜೇರು, ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹಿಲ್ಲೂರು, ಕೇಶವ ಕೊಳಗಿ, ವಿ.ಗಣಪತಿ ಭಟ್ಟ ರಂಥ ಪ್ರಸಿದ್ಧ ಭಾಗವತರುಗಳಿಂದ ಅಲ್ಲದೇ ಪ್ರಸಿದ್ಧ ಅರ್ಥದಾರಿಗಳಿಂದ ಈ ಸಪ್ತಾಹ ಕಲಾರಸಿಕರಿಗೆ ಆನಂದ ನೀಡಲಿದೆ.

    300x250 AD


    ಅ.24 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ರೋ.ಎಂ.ಎ. ಹೆಗಡೆಯವರಿಗೆ ಮರಣೋತ್ತರವಾಗಿ ದಿ.ಚಂದುಬಾಬು ಪ್ರಶಸ್ತಿ ನೀಡಲಿದ್ದು. ವಿ.ಉಮಾಕಾಂತ ಭಟ್ಟರು ನುಡಿನಮನ ಸಲ್ಲಿಸಲಿದ್ದಾರೆ. ಸಪ್ತಾಹ ಸಮಾರೊಪ ಕಾರ್ಯಕ್ರಮ ಅ.30 ರಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

    Share This
    300x250 AD
    300x250 AD
    300x250 AD
    Back to top