ಅಂಕೋಲಾ: ತಾಲೂಕಿನ ಉಳವರೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೆÇಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಉಳವರೆ ಬೋಳಕುಂಟೆ ನಿವಾಸಿ ಭೈರು ಗೌಡ ಹಾಗೂ ಅದೇ ಗ್ರಾಮದ ಗುರು ಗೌಡ ಬಂಧಿತ ಆರೋಪಿಗಳು. ಇವರಿಂದ 4500 ಮೌಲ್ಯದ 128 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇವರು ಬೋಳಕುಂಟೆ ನಿವಾಸಿ ಸುಕ್ರು ಗೌಡನಿಂದ ಗಾಂಜಾವನ್ನು ಖರೀದಿಸಿ ತರುತ್ತಿದ್ದರು ಎನ್ನಲಾಗಿದೆ. ಆಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೆÇಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.