ಭಟ್ಕಳ: ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಸಮುದ್ರದಲ್ಲಿ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಭಟ್ಕಳದ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಸಮುದ್ರದಲ್ಲಿ ಬಿದ್ದು ನಾಪತ್ತೆಯಾದ ವ್ಯಕ್ತಿಯನ್ನು ಕುಮಟಾ ಮೂಲದ ದಿವಗಿ ನಿವಾಸಿ ಗಂಗಾಧರ ಅಂಬಿಗ ಎಂದು ಗುರುತಿಸಲಾಗಿದೆ. ಹರಿ ಓಂ ಬೋಟ್ ನಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ನಾಪತ್ತೆಯಾದ ವ್ಯಕ್ತಿಯ ಭಾವ ಸಂತೋಷ ಅಂಬಿಗ ಭಟ್ಕಳದ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.