ಶಿರಸಿ: ಸಾಹಿತ್ಯ ಚಿಂತನ ಚಾವಡಿ, ಶಿರಸಿ ಇವರ ಆಶ್ರಯದಲ್ಲಿ ದಸರಾ ಕವಿಗೋಷ್ಟಿ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಶಿರಸಿಯ ನೆಮ್ಮದಿ ಕುಟೀರದಲ್ಲಿ ಅ.17 ರವಿವಾರ ಮಧ್ಯಾಹ್ನ 3 ಗಂಟೆಗೆ ಆಯೋಜಿಸಿದೆ.
ಸಾಹಿತ್ಯ ಚಿಂತಕ ಚಾವಡಿಯ ಸಂಸ್ಥಾಪಕ ಎಸ್.ಎಸ್.ಭಟ್ ಸಭಾಧ್ಯಕ್ಷತೆ ವಹಿಸುವರು. ಶಿರಸಿಯ ಸುಮುಖ ಟಿ.ವಿ ಸಂಪಾದಕ ಸುಬ್ರಾಯ ಭಟ್ ಬಕ್ಕಳ ಸಮಾರಂಭವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕಿ ಡಾ.ವಿಜಯನಳಿನಿ ರಮೇಶ ಉಪಸ್ಥಿತರಿರುವರು. ಬರಹಗಾರರೂ, ಬಳಗದ ಹಿತೈಷಿಗಳೂ ಆದ ದಿವಸ್ಪತಿ ಭಟ್ ರವರು ಬಳಗದಲ್ಲಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು. ಕವಿಗೋಷ್ಟಿಯಲ್ಲಿ ಕವಿತೆ, ಚುಟುಕು ವಾಚನ ಮಾಡುವವರು ಕಾರ್ಯಕ್ರಮದ ಸಂಘಟಕರಾದ ದತ್ತಗುರು ಕಂಠಿ (9483648230) ಯವರಲ್ಲಿ ಹೆಸರು ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.