• Slide
    Slide
    Slide
    previous arrow
    next arrow
  • ಕಲಾವಿದರು ರಾಮನಾಗಿ ಸಮುದಾಯ ಎಚ್ಚರಿಸಬೇಕು; ಸುಬ್ರಾಯ ಮತ್ತೀಹಳ್ಳಿ

    300x250 AD

    ಶಿರಸಿ: ವಿಶ್ವ ವಿದ್ಯಾಲಯಗಳು ನಮ್ಮ ಪರಂಪರೆ ಮರೆತಿವೆ. ನಾವೇ ಅದನ್ನು ಉಳಿಸಿ ಸಾಂಸ್ಕøತೀಕರಣ ಮಾಡುವ ಕಾರ್ಯ ಆಗಬೇಕು ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಹೇಳಿದರು.


    ಶುಕ್ರವಾರ ಅವರು ಹಿರಿಯ ಯಕ್ಷಗಾನ ತಾಳಮದ್ದಲೆ ಅರ್ಥದಾರಿ, ಸಂಘಟಕ ಕಾನಸೂರಿನ ರತ್ನಾಕರ ಭಟ್ಟರಿಗೆ ಯಕ್ಷ ಸೇವಾ ರತ್ನ ಪ್ರಶಸ್ತಿಯನ್ನು ಬಾಳಗಾರ ಜೋಗಿಮನೆ ಬಳಗದಿಂದ ಆರು ದಶಕಗಳ ಬಳಿಕ ಆಯೋಜಿಸಿರುವ ತಾಳಮದ್ದಲೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ರಾಮನಾಗಿ ಕಲಾವಿದರು ಸಮುದಾಯ ಎಚ್ಚರಿಸುವ ಕಾರ್ಯ ಮಾಡಬೇಕಿದೆ. ಪ್ರೇಕ್ಷಕ, ಕಲಾವಿದರು ಬೇರೆಲ್ಲ. ಅವರ ನಡುವೆ ಮೌಖಿಕ ಸಂವಾದ ಆಗುತ್ತಿರುತ್ತೆ ಎಂದರು. ಆಧುನಿಕ ಬದುಕಿನ ಮಾಯದ ಜಿಂಕೆ ನಮ್ಮೊಳಗೂ ಇದ್ದು ಅದರನ ಬಗ್ಗೂ ಜಾಗೃತಿಗೊಳಿಸಿ ಕೊಳ್ಳಬೇಕು. ಇಲ್ಲದಿದ್ದರೆ ಮಾಯಾ ಜಿಂಕೆ ದುರಂತಕ್ಕೆ ಕಾರಣವಾಗುತ್ತದೆ ಎಂದರು.


    ಭಾರತ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ. ಆದರೆ, ಸಂಸ್ಕøತಿ ಕಾಯುವ ಕಾಯುವ ಸೈನಿಕರು. ಪರಂಪರೆ ಉಳಿಸುತ್ತಿದ್ದಾರೆ ಎಂದು ಬಣ್ಣಿಸಿದರು. ಬ್ರಿಟೀಷರ ವಿರುದ್ದ ಹೋರಾಟದಲ್ಲೂ ಕಲಾವಿದರು ಕಲೆಯ ಮೂಲಕ ಜಾಗೃತಿಯ ಕಾರ್ಯ ಮಾಡಿದ್ದಾರೆ. ಒಂದು ರೀತಿಯಲ್ಲಿ ಶಿಕ್ಷಕರು ಆಗಿದ್ದಾರೆ. ಮಾತು, ಮಾತೆ ಎರಡೂ ಒಂದೆ. ಪ್ರತಿಯೊಬ್ಬರ ಮನಸ್ಸಿಗೆ ಮುಟ್ಟುತ್ತದೆ ಎಂದರು.

    300x250 AD


    ಸನ್ಮಾನಿತರಾದ ರತ್ನಾಕರ ಭಟ್ಟ, ಸಮ್ಮಾನಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಕಲೆ ನನ್ನ ಪ್ರೀತಿಯ ಕಾರ್ಯ ಎಂದರು.


    ರಾಷ್ಟ್ರೀಯ ಪಠ್ಯಕ್ರಮದ ಸದಸ್ಯ ಡಾ.ಬಾಲಕೃಷ್ಣ ಹೆಗಡೆ, ಎಲ್ಲ ವಿವಿಗಳು ಬಿಎ ಪದವಿ ಹೊಸ ಪಠ್ಯಕ್ರಮದಲ್ಲಿ ಸಾಂಸ್ಕ್ರತಿಕ ಪಠ್ಯವೂ ಸೇರಿದೆ. ಯಕ್ಷಗಾನ, ಬಯಲಾಟ, ಕಲೆ, ಹಬ್ಬ ಹರಿದಿನಗಳು ನೂರು ಅಂಕಗಳ ಪತ್ರಿಕೆ ಇದೆ. ಈವರೆಗೆ ಇಲ್ಲದ ಕೊರತೆ ನೀಗಿಸಿದ್ದೇವೆ ಎಂದರು. ಜೋಗಿಮನೆಯ ಅನಂತ ರಾಮಕೃಷ್ಣ ಹೆಗಡೆ , ಪಾರ್ವತಿ ಮಂಜುನಾಥ ಹೆಗಡೆ, ಮೈತ್ರೇಯ ಹೆಗಡೆ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top