ಶಿರಸಿ: ಹಿರಿಯ ಪತ್ರಕರ್ತ, ಪ್ರಜಾವಾಣ ದೈನಿಕದ ಕಾರ್ಯನಿರ್ವಾಹಕ ಸಂಪಾದಕ, ಮೂಲತಃ ಉತ್ತರ ಕನ್ನಡದವರಾದ ರವೀಂದ್ರ ಭಟ್ಟ ಅವರಿಗೆ ಮುರುಘಾ ಶ್ರೀ ಪ್ರಶಸ್ತಿಯನ್ನು ಚಿತ್ರದುರ್ಗದ ಬ್ರಹನ್ಮಠದ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು.
ಚಿತ್ರದುರ್ಗದಲ್ಲಿ ನಡೆದ ಶರಣ ಸಂಸ್ಕ್ರತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಶ್ರೀಗಳು, ರವೀಂದ್ರ ಭಟ್ಟ ಅವರು ಮಾಧ್ಯಮ ಕ್ಷೇತ್ರದಲ್ಲಿ ಮಾಡಿದ ಕಾರ್ಯ ಬಣ್ಣಿಸಿದರು. ಈ ವೇಳೆ ಪೇಜಾವರ ಸ್ವಾಮೀಜಿಗಳು, ಕೇಂದ್ರ ಸಚಿವ ನಾರಾಯಣ ಸ್ವಾಮಿ ಇತರರು ಇದ್ದರು.