ಶಿರಸಿ: ಯುವಕರು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡಲ್ಲಿ ಸಧೃಢ ಭಾರತ ನಿರ್ಮಾಣ ಸಾಧ್ಯ ಎಂದು ತೋಟಗಾರಿಕಾ ವಿದ್ಯಾಲಯದ ಪ್ರಭಾರಿ ಡೀನ್ ಡಾ. ಎಮ್.ಎಚ್.ತಟಗಾರ ಹೇಳಿದರು.
ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಯೋಗದಿಂದ ಸ್ವಯಂ ವ್ಯಕ್ತಿತ್ವ ವಿಕಾಸವೂ ಸಾಧ್ಯವಾಗಲಿದ್ದು, ದೇಶವನ್ನೂ ಔನ್ನತ್ಯದೆಡೆಗೆ ಕರೆದೊಯ್ಯಬಹುದು ಎಂದರು.
ಪತಂಜಲಿ ಯೋಗ ಶಿಬಿರ, ಶಿರಸಿ ರವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ವೇಳೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕ ರಾಜಣ್ಣ ಅಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಯೋಜಕರಾದ ಡಾ. ಆರ್.ಎಸ್.ಹಿರೇಮಠ, ದೈಹಿಕ ಡಾ. ರತ್ನಾಕರ ಶೇಠ, ರಮೇಶ ಎ.ಪಿ, ದಾಮೋದರ ತುಕಾರಾಮ, ಶಿಕ್ಷಣ ಶಿಕ್ಷಕ, ಚಂದನ ಕೆ ಇದ್ದರು.