• Slide
    Slide
    Slide
    previous arrow
    next arrow
  • ಅಲೆಗಳ ರಭಸಕ್ಕೆ ಸಿಕ್ಕ ನಾಲ್ವರು ಪ್ರವಾಸಿಗರ ರಕ್ಷಿಸಿದ ಲೈಫ್’ಗಾರ್ಡ್ ಸಿಬ್ಬಂದಿಗಳು

    300x250 AD

    ಗೋಕರ್ಣ: ಸಮುದ್ರದಲ್ಲಿ ಈಜಾಡಲು ತೆರಳಿದ್ದ ನಾಲ್ವರು ಅಲೆಯ ರಭಸಕ್ಕೆ ಕೊಚ್ಚಿಹೋಗುತ್ತಿದ್ದರು. ಈ ವೇಳೆ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಡ್ಲೆ ಬೀಚ್ ಕಡಲತೀರದಲ್ಲಿ ನಡೆದಿದೆ.


    ಬೀದರ ಜಿಲ್ಲೆಯ ಕಮಲಾನಗರದ ಉಮಾಕಾಂತ ವಾಸುಮತಿ, ಆಂದ್ರ ಪ್ರದೇಶದ ಕಾನ್ಸುರ್ ಮೂಲದ ತೇಜಸ್ವಿ ಬಿರ್ಜೆ ಮೋಹನಸಿಂಗ್, ಬೆಳಗಾವಿಯ ನಿಶಾದ್ ರಾಘವೇಂದ್ರ ಕುಲಕರ್ಣಿ, ಬಿಹಾರದ ನಿಶಾನ್ ಸೀನಾ ಪಟ್ಕಾ ರಕ್ಷಣೆಗೊಳಗಾದ ಪ್ರವಾಸಿಗರು. ಬೆಂಗಳೂರು ಕಾಲೇಜಿನ ಇವರು ಗೋಕರ್ಣದ ಕುಡ್ಲೆಬೀಚ್ ಪ್ರವಾಸಕ್ಕೆಂದು ಆಗಮಿಸಿದ್ದರು. ಬಳಿಕ ಇವರೆಲ್ಲರೂ ಸಮುದ್ರದಲ್ಲಿ ಈಜಲು ತೆರಳಿದ್ದು, ನಾಲ್ವರು ಯುವಕರು ನೀರಿನ ರಭಸದ ಸುಳಿಗೆ ಸಿಕ್ಕು ಕೊಚ್ಚಿ ಹೋಗುತ್ತಿರುವಾಗ ಲೈಫ್ ಗಾರ್ಡ್ ಸಿಬ್ಬಂದಿ ಗಮನಿಸಿದ್ದಾರೆ.

    300x250 AD


    ಕೂಡಲೇ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ರಾಜು ಅಂಬಿಗ,ನಾಗೇಂದ್ರ ಕುರ್ಲೆ,ಪ್ರವಾಸಿ ಮಿತ್ರ ಶೇಖರ ಬಿ.ಹರಿಕಂತ್ರ,ಕರಾವಳಿ ಕಾವಲು ಪಡೆ ಸಿಬ್ಬಂದಿ ನಾಗೇಂದ್ರ ಜಿ.ಠಾಕರ್ ಅವರು ಸ್ಥಳೀಯ ವಾಟರ್ ಸ್ಪೋಟ್ರ್ಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಕೋಚ್ಚಿಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top