Slide
Slide
Slide
previous arrow
next arrow

ಬಿಜಿಎಸ್ ಸೆಂಟ್ರಲ್ ಸ್ಕೂಲ್ ಯುಕೆಜಿ ವಿದ್ಯಾರ್ಥಿಗಳಿಗೆ ಗ್ರಾಜ್ಯುಯೇಶನ್ ಡೇ

300x250 AD

ಕುಮಟಾ: ಮಿರ್ಜಾನ್‌ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ನಿಶ್ಚಲಾನಂದನಾಥಜೀಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ನ ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನಿನಲ್ಲಿ ಯುಕೆಜಿ ವಿದ್ಯಾರ್ಥಿಗಳಿಗೆ ಗ್ರಾಜ್ಯುಯೇಶನ್ ಡೇ ಸಮಾರಂಭ ನಡೆಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮಿರ್ಜಾನ್‌ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ನಿಶ್ಚಲಾನಂದನಾಥಜೀ ಸರ್ವರನ್ನು ಆಶೀರ್ವದಿಸಿ, ನಮ್ಮ ಬಿಜಿಎಸ್ ಪೂರ್ವಪ್ರಾಥಮಿಕ ಶಾಲೆಯಲ್ಲಿ ಆಟದ ಜೊತೆ ಪಾಠಗಳನ್ನು ಕೇಳುತ್ತಾ ಯುಕೆಜಿ ಶಿಕ್ಷಣ ಪಡೆದ ಪುಟಾಣಿಗಳು 2025-26 ನೇ ಸಾಲಿನಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುತ್ತಿರುವುದು ತುಂಬಾ ಸಂತಸದ ಸಂಗತಿ. ಎಷ್ಟೋ ಸಲ ವಿಫಲನಾದರೂ ಥಾಮಸ್‌ ಎಲ್ವಾ ಎಡಿಸನ್‌ ಹೇಗೆ ವಿದ್ಯುತ್‌ ಬಲ್ಬ್‌ ಕಂಡುಹಿಡಿದ ಎಂಬ ನಿದರ್ಶನದೊಂದಿಗೆ ಪುಟಾಣಿಗಳಿಗೆ ಆಶೀರ್ವಚನ ನೀಡಿದರು.

300x250 AD

ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಬಿಜಿಎಸ್‌ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಎಂ. ಟಿ. ಗೌಡ ಮಾತನಾಡಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹಿಸುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿದೆ ಎಂದರು.
ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್, ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರೇಷ್ಮಾ ಬಾಡ್ಕರ್, ಮಾತನಾಡಿದರು. ಬಿಜಿಎಸ್ ಪೂರ್ವಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಂಜನಾ ಯುಕೆಜಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕಿ ಸಹನಾ ನಾಯ್ಕ ಮತ್ತು ರೇಷ್ಮಾ ರಾಯ್ಕರ್ ಸಹಕರಿಸಿದರು. ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರುಣ್ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಅಸ್ಮಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ತರುಣ್, ಆಝಾನ್, ನಮಸ್ವಿ, ಶೇಹ್ರಾನ್ ಮತ್ತು ರಕ್ಷಾ ತಮ್ಮ ಅನಿಸಿಕೆ ಹಂಚಿಕೊಂಡರು. ಹಿರಿಯ ಶಿಕ್ಷಕಿ ಲೀನಾ ಎಂ. ಗೊನೇಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಪ್ರಾರ್ಥಿಸಿದನು. ಸೀಮಾ ಸ್ವಾಗತಿಸಿದಳು. ರಕ್ಷಾ ಸರ್ವರನ್ನೂ ವಂದಿಸಿದಳು. ಮಂಜುನಾಥ ಗುನಗಾ ಮತ್ತು ಗಣಪತಿ ನಾಯಕ ಸಹಕರಿಸಿದರು.

Share This
300x250 AD
300x250 AD
300x250 AD
Back to top