ದಾಂಡೇಲಿ : ಭಾರತೀಯ ಜನತಾ ಪಾರ್ಟಿಯ ದಾಂಡೇಲಿ ಮಂಡಲದ ನಿಕಟ ಪೂರ್ವ ಅಧ್ಯಕ್ಷರಾದ ಚಂದ್ರಕಾಂತ ಕ್ಷೀರಸಾಗರ ಅವರ ತಾಯಿ ಮುಕ್ತಾಬಾಯಿ ಕ್ಷೀರಸಾಗರ ಅವರು ಶನಿವಾರ ವಿಧಿವಶರಾದರು. ಮೃತರಿಗೆ 86 ವರ್ಷ ವಯಸ್ಸಾಗಿತ್ತು.
ಸರಳ, ಸಜ್ಜನಿಕೆಯ ಆದರ್ಶ ಗೃಹಿಣಿಯಾಗಿದ್ದ ಮುಕ್ತಾಬಾಯಿ ಕ್ಷೀರಸಾಗರ ಅವರು ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಮೃತರು ಚಂದ್ರಕಾಂತ ಕ್ಷೀರಸಾಗರ ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಸುಪುತ್ರಿಯನ್ನು ಮತ್ತು ಅಪಾರ ಸಂಖ್ಯೆಯಲ್ಲಿ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.