ಸಿದ್ದಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಾಪುರದಲ್ಲಿ ಬಿ.ಎ ಹಾಗೂ ಬಿ.ಕಾಂ ವಿದ್ಯಾರ್ಥಿಗಳಿಗೆ “ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರದ ಪ್ರಸ್ತುತತೆ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಉದ್ಯೋಗ ಕೋಶ ಹಾಗೂ ಐಕ್ಯುಎಸಿ ಘಟಕಗಳ ವತಿಯಿಂದ ಆಯೋಜಿಸಲಾಗಿತ್ತು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಥಶಾಸ್ತ್ರದ ಪ್ರಾಮುಖ್ಯತೆ ಹಾಗೂ ಪಿ.ಯು.ಸಿ ಸರ್ಕಾರಿ ಉಪನ್ಯಾಸಕರ ಪರೀಕ್ಷೆಗೆ ವಿದ್ಯಾರ್ಥಿಗಳು ಯಾವ ರೀತಿ ತಯಾರಿ ನಡೆಸಬೇಕೆಂದು ಈ ಕಾರ್ಯಕ್ರಮದಲ್ಲಿ ತಿಳಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಲಗೇರಿ ಸರ್ಕಾರಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ನಾರಾಯಣ ನಾಯ್ಕ್ ಆಗಮಿಸಿದ್ದರು. ಅವರು ಅರ್ಥಶಾಸ್ತ್ರದ ಪ್ರಾಮುಖ್ಯತೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳು ಯಾವ ರೀತಿ ತಯಾರಿ ನಡೆಸಬೇಕೆಂದು ಉಪದೇಶ ನೀಡಿದರು. ಅವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಲು ಸತತ ವಿದ್ಯೆಯದ ಅಧ್ಯಯನ, ಸಾಮಾನ್ಯ ಜ್ಞಾನ ಹಾಗೂ ಒಳ್ಳೇಯ ಸ್ನೇಹಿತರ ಸಂಘದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ ಎನ್ ನಾಯ್ಕ ರವರು ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರದ ಮುಖ್ಯಸ್ಥರು ಹಾಗೂ ಉದ್ಯೋಗಕೋಶದ ಸಂಚಾಲಕರಾದ ಡಾ. ಜಿ.ಕೆ ಚೇತನ್ಕುಮಾರ, ಐ.ಕ್ಯು. ಎ.ಸಿ ಘಟಕದ ಸಂಚಾಲಕರಾದ ಡಾ. ರಶ್ಮಿ ಎನ್ ಕರ್ಕಿ ಹಾಗೂ ಅರ್ಥಶಾಸ್ತ್ರದ ಉಪನ್ಯಾಸಕರಾದ ಈರೇಶ ಆರ್. ಉಪಸ್ಥಿತರಿದ್ದರು.