Slide
Slide
Slide
previous arrow
next arrow

ವಯಕ್ತಿಕ ದ್ವೇಷ: ಹಣ್ಣಿನ ಅಂಗಡಿಗೆ ಬೆಂಕಿಯಿಟ್ಟ ಭೂಪ

300x250 AD

ಭಟ್ಕಳ: ಹಣ್ಣಿನ ಅಂಗಡಿಯ ಮಾಲೀಕನ ಮೇಲಿನ ದ್ವೇಷದಿಂದ ಹಣ್ಣಿನ ಅಂಗಡಿಗೆ ಪೆಟ್ರೋಲ್ ಹಾಕಿ ಬೆಂಕಿ ಹೆಚ್ಚಿರುವ ಘಟನೆ ಭಟ್ಕಳ ತಾಲೂಕಾ ಪಂಚಾಯತ ಮುಂಭಾಗದಲ್ಲಿ ಗುರುವಾರ ಮುಂಜಾನೆ 2.30 ಸುಮಾರಿಗೆ ನಡೆದಿದೆ.

ಮಾವಿನ ಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡ ಕೋಟೆಮನೆ ರಾಮಚಂದ್ರ ಜಟ್ಟಪ್ಪ ನಾಯ್ಕ ಇವರಿಗೆ ಸೇರಿದ ಹಣ್ಣಿನ ಅಂಗಡಿ ಇದಾಗಿದೆ. ಇವರು ಇಲ್ಲಿನ ತಾಲೂಕಾ ಪಂಚಾಯತ ಮುಂಭಾಗದಲ್ಲಿ ತಾತ್ಕಾಲಿಕ ಹೆಣ್ಣಿನ ಅಂಗಡಿಗೆ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಇವರ ಮೇಲಿನ ದ್ವೇಷದಿಂದಾಗಿ
ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವುದರಿಂದ ಹಣ್ಣಿನ ಅಂಗಡಿ ಹಾಗೂ ಅಂಗಡಿಯಲ್ಲಿದ್ದ ಇತರೆ ಸಾಮಾನುಗಳು ಸೇರಿ ಒಟ್ಟು 7 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಹೋಗಿದೆ. ಅದೇ ರೀತಿ ನನ್ನ ಅಂಗಡಿಗೆ ಯಾರೋ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವ ಬಗ್ಗೆ ಸಂಶಯವಿದೆ ಈ ಬಗ್ಗೆ ತನಿಖೆ ಮಾಡುವಂತೆ ಪ್ರಕರಣ ನೀಡಿದ್ದಾರೆ.

300x250 AD

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿಹಣ್ಣಿನ ಅಂಗಡಿಯ ಮಾಲೀಕ ರಾಮಚಂದ್ರ ನಾಯ್ಕ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ

Share This
300x250 AD
300x250 AD
300x250 AD
Back to top