Slide
Slide
Slide
previous arrow
next arrow

ಬಿಜಿಎಸ್‌ ಸೆಂಟ್ರಲ್‌ ಸ್ಕೂಲಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

300x250 AD

ಕುಮಟಾ: ತಾಲೂಕಿನ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್‌ ಸ್ಕೂಲ್‌, ಮಿರ್ಜಾನ್, ಮತ್ತು ಆದಿಚುಂಚನಗಿರಿ
ಇಂಡಿಪೆಂಡೆಂಟ್‌ ಪಿಯು ಕಾಲೇಜಿನ್‌ ಸಂಯುಕ್ತ ಆಶ್ರಯದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ಬಿಜಿಎಸ್ ಸಂಸ್ಥೆಯ ಆಡಳಿತಾಧಿಕಾರಿಗಳಾಗಿರುವ ಜಿ. ಮಂಜುನಾಥ್, ವಾಲ್ಮೀಕಿ ಮಹರ್ಷಿಯ ಜನ್ಮ ವೃತ್ತಾಂತ ಮತ್ತು ಅವರು ರಚಿಸಿದ ಮಹಾಕಾವ್ಯ ರಾಮಾಯಣದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.  ಹಾಗೆಯೇ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ನಾವೆಲ್ಲರೂ
ವಿದ್ಯಾರ್ಥಿಗಳಿಗೆ ವಾಲ್ಮೀಕಿಯಂತಹ ಮಹಾನ್‌ ಸಾಧು-ಸಂತರ, ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ ಆಗಾಗ ಹೇಳಿ, ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಮೂಡಿಸಿದರೆ, ಅವರು ನಮ್ಮ ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.   ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀಧರ ಹೆಚ್.‌ ಆರ್. ರತ್ನಾಕರ ನಾರದ ಮುನಿಗಳ ಉಪದೇಶದಿಂದ
ವಾಲ್ಮೀಕಿ ಮಹರ್ಷಿ‌ ಹೇಗೆ ಆದರು, ನಾವು ಮಾಡಿದ ಪಾಪ ಮತ್ತು ಪುಣ್ಯ ಕರ್ಮಗಳೆಲ್ಲವನ್ನು ಭಗವಂತ ಪರಿಗಣಿಸುತ್ತಾನೆ. ಅದಕ್ಕೆ ವಾಲ್ಮೀಕಿ ಮಹರ್ಷಿಯ ಜೀವನ ವೃತ್ತಾಂತ ಉತ್ತಮ ಉದಾಹರಣೆ ಎಂದರು.

300x250 AD

ಬಿಜಿಎಸ್ ಸೆಂಟ್ರಲ್‌ ಸ್ಕೂಲ್‌ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್‌ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಸಂಧ್ಯಾ ನಾಯಕ ಪ್ರಾರ್ಥಿಸಿದರು. ‌ಶಿಕ್ಷಕ ರಮೇಶ ವಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರಂಜನಾ ಆಚಾರ್ಯ  ಮಹರ್ಷಿ ವಾಲ್ಮೀಕಿಯವರ
ಕುರಿತು ಉತ್ತಮ ಗೀತೆಯನ್ನು ಹಾಡಿದರು. ಹಿಂದಿ ವಿಭಾಗದ ಉಪನ್ಯಾಸಕಿ ಶ್ರೀಮತಿ ಸೌಭಾಗ್ಯ ಬಾಳೇರಿಯವರು ವಂದಿಸಿರು. ಆದಿಚುಂಚನಗಿರಿ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರೇಷ್ಮಾ ಬಾಡ್ಕರ್‌,  ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ,ನಿಕಟಪೂರ್ವ ಪ್ರಾಂಶುಪಾಲೆ ಶ್ರೀಮತಿ ಲೀನಾ ಗೊನೆಹಳ್ಳಿ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top