Slide
Slide
Slide
previous arrow
next arrow

‘ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತದೆ’

300x250 AD

ಯಲ್ಲಾಪುರ : ‘ವಿಶ್ವ ಹಿಂದೂ ಪರಿಷತ್ ನ ಚಟುವಟಿಕೆಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.

ಪಟ್ಟಣದ ಶಕ್ತಿಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಕಾಯಕ್ರಮದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಮಾನವೀಯ ಸಂಬಂಧಗಳು ಹಳಸುತ್ತಿದೆ. ಕುಟುಂಭದಲ್ಲಿ ಸಂಬಂಧದ ಭಾವನೆ ಮೂಡಿಸಲು ವಿಶ್ವ ಹಿಂದೂ ಪರಿಷತ್ ಪಂಚ ಶಿಷ್ಟಾಚಾರವನ್ನು ಅಳವಡಿಸಿಕೊಳ್ಳಲು,ಆದರ್ಶ ಕುಟುಂಬ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ಕುಟುಂಬ ಪ್ರಭೋದನ ಎಂಬ ಕಾರ್ಯಕ್ರಮ ನಡೆಸುತ್ತಿದೆ ಎಂದ ಅವರು ಸಂಘಟನೆಯ ದೃಷ್ಠಿಯಿಂದ ಸಂಖ್ಯೆ ಕಡಿಮೆಯಾದರೂ ಸಂಘಟಿಸುವ ಕಾರ್ಯ ಬಿಡಬಾರದು ಅದು ನಮ್ಮಲ್ಲಿ ಬದಲಾವಣೆ ತರುತ್ತದೆ’ ಎಂದರು.

ಜಿಲ್ಲಾ ಉಪಾಧ್ಯಕ್ಷ ನಾರಾಯಣ ನಾಯ್ಕ ಮಾತನಾಡಿ ಹಿಂದೂ ಸಂಪ್ರದಾಯದ ಹಬ್ಬಗಳನ್ನು ಪ್ರತಿಮನೆಗಳಲ್ಲಿ ಆಚರಿಸಬೇಕು. ಕೃಷ್ಣಾಷ್ಟಮಿಯಂದು ಮಕ್ಕಳನ್ನು ಅಲಂಕರಿಸುವಲ್ಲಿ ಸಂಭ್ರಮಿಸುವ ಪಾಲಕರು ಕೃಷ್ಣನ ಆದರ್ಶಗಳ ಬಗ್ಗೆ ತಿಳಿಸುವ ಕಾರ್ಯಮಾಡುತ್ತಿಲ್ಲವಾಗಿರುವುದು ಬೇಸರದ ಸಂಗತಿ ಎಂದರು.

300x250 AD

ಜಿಲ್ಲಾ ಖಜಾಂಚಿ ನಾಗರಾಜ ಮದ್ಗುಣಿ ಮಾತನಾಡಿ, ‘ ನಾವು ನಮ್ಮ ಮಕ್ಕಳಲ್ಲಿ ಸಂಸ್ಕಾರವನ್ನು ನೀಡುವಲ್ಲಿ ಹಿಂದೆ ಬೀಳುತ್ತಿರುವುದು ಹಿಂದೂ ಸಂಘಟನೆ ಬಲಗೊಳ್ಳದಿರಲು ಕಾರಣ ಇದನ್ನು ಅರಿತು ನಮ್ಮ ಪಾಲಕರು ಜಾಗೃತರಾಗಬೇಕಿದೆ’ ಎಂದರು.

ಮಹಿಳಾ ಪ್ರಮುಖೆ ಶ್ಯಾಮಿಲಿ ಪಾಠನಕರ್ ಮಾತನಾಡಿ, ‘ಧರ್ಮ ಜಾಗೃತಿಗಾಗಿ ಹಿಂದೂ ಸಂಘಟನೆಯಾಗಬೇಕು. ಹಿಂದೂ ಭಾವನೆ ನಮ್ಮ ಮನದಿಂದ ಮೂಡಬೇಕು. ಹಿಂದೂ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪ್ರತಿ ಹಿಂದೂ ಭಾಗವಹಿಸಿ ಸಂಘಟನೆ ಬಲಪಡಿಸಬೇಕು’ ಎಂದರು.
ತಾಲೂಕು ಅಧ್ಯಕ್ಷ ಗಜಾನನ ನಾಯ್ಕ ಸ್ವಾಗತಿಸಿದರು, ಉಷಾ ಗಾಂವ್ಕರ್ ಭಗವದ್ಗೀತೆ ಪಠಣ ಮಾಡಿದರು, ನಗರಾಧ್ಯಕ್ಷ ಅನಂತ ಗಾಂವ್ಕರ್ ವಂದಿಸಿದರು.

Share This
300x250 AD
300x250 AD
300x250 AD
Back to top