ಅಂಕೋಲಾ : ಹಂಗೇರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಾಕೋ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನಶಿಪ್ 2024 ಸ್ಪರ್ಧೆಯಲ್ಲಿ ಕಾರವಾರದ ಅವನಿ ಸೂರಜ ರಾವ್ ಬೆಳ್ಳಿ ಪದಕದ ಗೆದ್ದು ಸಾಧನೆ ಮಾಡಿದ್ದಾಳೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಸೂರಜ್ ಮೋಹನ್ ಹಾಗೂ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಶೀತಲ ಗೌಡ ದಂಪತಿಗಳ ಪುತ್ರಿಯಾಗಿರುವ ಅವನಿ ಜಾಗತಿಕ ಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾಳೆ. ಕಿಕ್ ಬಾಕ್ಸಿಂಗ್ ಕೋಚ್ ಸೂರಜ್ ಮೋಹನ್ ಹಾಗೂ ಇಸ್ಮಾಯಿಲ್ ಗರಡಿಯಲ್ಲಿ ಪಳಗಿದ ಅವನಿ ಐಗಳ ಮಾರ್ಶಲ್ ಆರ್ಟ್ಸ್ ವಿದ್ಯಾರ್ಥಿನಿಯಾಗಿದ್ದಾಳೆ. ಕರಾಟೆ ತರಬೇತುದಾರರಾದ ಸುನೀಲ, ಶಹೀದ್ ಮತ್ತು ಅವಿನಾಶ ತರಬೇತಿಯನ್ನು ನೀಡಿದ್ದರು.