Slide
Slide
Slide
previous arrow
next arrow

ಕ್ರೀಡಾಕೂಟ: ಡೋನ್‌ಬೋಸ್ಕೊ ವಿದ್ಯಾರ್ಥಿಗಳಿಗೆ ವೀರಾಗ್ರಣಿ

300x250 AD

ಶಿರಸಿ: ಆ.20ರಂದು ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಡೋನ್‌ಬೋಸ್ಕೊ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಗುಂಪು ವಿಭಾಗದ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಗೈದು ವೀರಾಗ್ರಣಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಯಾಮ್ಯೂವೆಲ್ ಮಚಾಡೋ 100ಮೀ.- ಪ್ರಥಮ,200ಮೀ- ಪ್ರಥಮ, ಹರ್ಡಲ್ಸ್ 100ಮೀ.ಪ್ರಥಮ ಸ್ಥಾನ ಪಡೆದು ವೈಯಕ್ತಿಕವಾಗಿ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾನೆ ಹಾಗೂ ರೋಹಿತ್ ಗಾಂವಕರ್ 400ಮೀ. ಪ್ರಥಮ, 800ಮೀ.ಪ್ರಥಮ, ಹರ್ಡಲ್ಸ್ 400ಮೀ. ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ವೈಯಕ್ತಿಕವಾಗಿ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾನೆ. ಇನ್ನೂ ಅನೇಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವೈಯಕ್ತಿಕ ಹಾಗೂ ಗುಂಪು ಆಟಗಳಾದ ಕಬಡ್ಡಿ-ಪ್ರಥಮ , ವಾಲಿಬಾಲ್-ಪ್ರಥಮ, ಥ್ರೋ ಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್-ಪ್ರಥಮ, ರಿಲೇ(4*100)- ಪ್ರಥಮ, ರಿಲೇ(4*400)-ಪ್ರಥಮ, ಖೋ-ಖೋ ದ್ವಿತೀಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರು, ಆಢಳಿತ ಮಂಡಳಿ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತ ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top