ಶಿರಸಿ: ಇಲ್ಲಿನ ಇಕೋ ಕೇರ್ (ರಿ.) ಸಂಸ್ಥೆ, ಶಿರಸಿ ಹಾಗೂ ಕರ್ನಾಟಕ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ : ಉತ್ತರ ಕನ್ನಡ ಇವರ ಸಹಭಾಗಿತ್ವದಲ್ಲಿ ಆ.10ರಂದುಪ್ರವಾಹ ಪೀಡಿತ ಅಂಕೋಲಾ ತಾಲೂಕಿನ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹದಿಂದ ಹಾನಿಗೊಳಗಾದ ಏಳು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಹಾಗೂ BRICS ಕಂಪನಿಯ ನ್ಯಾಚುರಲ್ ಡಿಶ್ ವಾಶ್, ನ್ಯಾಚುರಲ್ ಹ್ಯಾಂಡ್ ವಾಶ್ ಉತ್ಪನ್ನಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಳವರೆಯಲ್ಲಿ ವಿತರಿಸಲಾಯಿತು. ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗುಡ್ಡ ಕುಸಿತದ ದುರಂತದಲ್ಲಿ ತನ್ನ ಜೀವದ ಹಂಗು ತೊರೆದು 5 ಮಕ್ಕಳನ್ನು ಕಾಪಾಡಿದ ಹುವಾ ಸಣ್ಣು ಗೌಡ ಇವರನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಆರೋಗ್ಯ, ಸ್ವಚ್ಛತೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಶಾಲೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹಸ್ತಾಂತರಿಸಲಾಯಿತು. ನಂತರ ಉಳವರೆ ಗ್ರಾಮದ ಪ್ರವಾಹ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು. ಈ ಸಂಧರ್ಭದಲ್ಲಿ ಇಕೋ ಕೇರ್ ಸಂಸ್ಥೆಯ ಅಧ್ಯಕ್ಷ ಸುನೀಲ ಭೋವಿ, ಉಪಾಧ್ಯಕ್ಷರಾದ ಪುಂಡಲೀಕ್ ಶಿರಸಿಕರ್, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ: ಉತ್ತರ ಕನ್ನಡದ ಅಧ್ಯಕ್ಷರಾದ ಮಹೇಶ್ ಡಿ. ನಾಯಕ್, ಇಕೋ ಕೇರ್ ಸಂಸ್ಥೆಯ ಕಾರ್ಯದರ್ಶಿ ರಮೇಶ್ ಬಿ. ನಾಯ್ಕ್, ಸದಸ್ಯರಾದ ಜಗದೀಶ್ ನಾಯ್ಕ್, ರಾಜೇಶ್ ವೆರ್ಣೇಕರ್, ದಿಲೀಪ್ ಹುಲಸ್ವಾರ್ ಉಪಸ್ಥಿತರಿದ್ದರು.
ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.