Slide
Slide
Slide
previous arrow
next arrow

ಸಂಸ್ಕಾರದಿಂದ ಧರ್ಮಾರ್ಥ,ಕಾಮ, ಮೋಕ್ಷಗಳು ದೊರೆಯುತ್ತವೆ: ವಿ. ವಿಶ್ವನಾಥ ಭಟ್

300x250 AD

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಲಕ್ಷ್ಮಿನೃಸಿಂಹ ಸಂಸ್ಕೃತಿ ಸಂಪದ ವೇದಿಕೆ ಸಹಕಾರದಲ್ಲಿ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವಿದ್ವಾನ್ ವಿಶ್ವನಾಥ ಭಟ್ಟ ನಿರ್ಗಾನ್ ಇವರಿಂದ ಭಾನುವಾರ ಉಪನ್ಯಾಸ ನಡೆಯಿತು.

ಅವರು ಶ್ರೀಮನ್ನೆಲೆ ಮಾವಿನಮಾವಿನ ಮಠದಲ್ಲಿ ಧಾರ್ಮಿಕ ಸಂಸ್ಕಾರಗಳು ಎಂಬ ವಿಷಯವಾಗಿ ಉಪನ್ಯಾಸವನ್ನು ಮಾಡುತ್ತಾ, ಮಾನವನಿಗೆ ದೇವಋಣ, ಋಷಿ ಋಣ, ಪಿತೃ ಋಣ ಇವುಗಳನ್ನು ಕಳಚಿಕೊಳ್ಳಲು ಸಂಸ್ಕಾರಗಳಿಂದ ಸಾಧ್ಯ.  ಸಂಸ್ಕಾರಗಳಿಂದ ಮಾನವನು ಪುನೀತನಾಗುತ್ತಾನೆ. ಇಂತಹ ಸಂಸ್ಕಾರಗಳು ಶೃತಿ ಸ್ಮೃತಿ ಪುರಾಣಗಳಿಂದ, ಋಷಿಗಳಿಂದ, ಗುರುಗಳಿಂದ, ಹಿರಿಯರಿಂದ ಮತ್ತು ನಮ್ಮ ಪೂರ್ವಜರಿಂದ ದೊರಕಿರುವುದರಿಂದ ಇವುಗಳನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ತಲುಪಿಸುವುದು ವರ್ತಮಾನ ಕಾಲಕ್ಕೆ ಅತೀ ಅವಶ್ಯವಾಗಿದೆ ಇದಕ್ಕೆ ರಘು ಮಹಾರಾಜರ ಕಥೆಯ ಮುಖಾಂತರ ದೃಷ್ಟಾಂತದ ಮೂಲಕ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಠದ ಆಡಳಿತ ಮಂಡಳಿ ಸದಸ್ಯರು, ಶಿಷ್ಯವೃಂದದವರು, ಭಕ್ತರು ಪಾಲ್ಗೊಂಡಿದ್ದರು.

300x250 AD

Share This
300x250 AD
300x250 AD
300x250 AD
Back to top