ಶಿರಸಿ: ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಅತ್ಯಂತ ಸಂಭ್ರಮದಿಂದ, ವೈಭವಯುತವಾಗಿ ಆಚರಿಸುವ ಗಣೇಶೋತ್ಸವ ಸಮಿತಿ ಎಂದೇ ಗುರುತಿಸಿಕೊಂಡಿರುವ ಇಲ್ಲಿನ ಅಯ್ಯಪ್ಪ ನಗರ-ಗುಡ್ಡದಮನೆ-ಹುಬ್ಬಳ್ಳಿ ರಸ್ತೆಯ ಶಿರಸಿ ಕಾ ಮಹಾರಾಜ್ ಸಮಿತಿಯ ಪದಾಧಿಕಾರಿಗಳು ಈ ಬಾರಿ ಶಿರಸಿಯ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸಂಕಲ್ಪ ಹೊಂದಿದೆ.
20ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ 13 ಅಡಿ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಶನಿವಾರ ಶಾಸಕ ಭೀಮಣ್ಣ ನಾಯ್ಕ 20ನೇ ಗಣೇಶೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು.
ಈ ವೇಳೆ ಶಿರಸಿ ಕಾ ಮಹಾರಾಜ್ ಸಮಿತಿಯ ಅಧ್ಯಕ್ಷ ಪ್ರವೀಣ ಮಡಗಾಂವ್ಕರ್, ಉಪಾಧ್ಯಕ್ಷ ಪ್ರದೀಪ ಪವಾರ್, ಕಾರ್ಯದರ್ಶಿ ರಿಷಬ್ ಚಂದಾವರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.